ಭಾರತದಲ್ಲಿ ಈವರೆಗೆ ಎಷ್ಟು ಮಂದಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ: ವೈದ್ಯಕೀಯ ಸಂಶೋಧನಾ ಮಂಡಳಿ ಏನು ಹೇಳುತ್ತೆ?

ಹೊಸದಿಲ್ಲಿ, ಎ.11 : ದೇಶದಲ್ಲಿ ಮಾರಕ ಕೊರೋನ ಸೋಂಕು ತಲ್ಲಣ ಸೃಷ್ಟಿಸಿದ್ದು, ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ವ್ಯಾಪಿಸುತ್ತಲೇ ಇದೆ. ಏತನ್ಮಧ್ಯೆ, ದೇಶಾದ್ಯಂತ ಏ.10ರವರೆಗೆ 1,61,330 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟಪಡಿಸಿದೆ.

ಎ.10ರಂದು ರಾತ್ರಿ 9 ಗಂಟೆಯವರೆಗೆ 1, 47,034 ಮಂದಿಯಿಂದ ಸಂಗ್ರಹಿಸಲಾದ 1,61,330 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಕೊರೊನಾ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಕೋವಿಡ್-19 ಲಕ್ಷಣವಿರುವ ಎಲ್ಲ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಪರೀಕ್ಷಗಾಗಿ ದೇಶಾದ್ಯಂತ 213 ಲ್ಯಾಬ್ ಗಳ ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 145 ಸರ್ಕಾರಿ 67 ಖಾಸಗಿ ಪ್ರಯೋಗಾಲಯಗಳಾಗಿವೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

Also Read  ಆರೆಸ್ಸೆಸ್ ಕಾರ್ಯಕರ್ತನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ...!

error: Content is protected !!
Scroll to Top