ನೀಟ್​ ಪಠ್ಯಕ್ರಮದಲ್ಲಿ ಬದಲಾವಣೆಯಿಲ್ಲ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಸ್ಪಷ್ಟನೆ

ಹೊಸದಿಲ್ಲಿ, ಎ.4: ವೈದ್ಯಕೀಯ ಪದವಿ ಕೋರ್ಸ್​ಗಳಿಗೆ ಪ್ರವೇಶ ಬಯಸುವ ಆಕಾಂಕ್ಷಿಗಳು ಬರೆಯಬೇಕಾದ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್​) ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಪರೀಕ್ಷೆಗಳನ್ನು ಸಂಘಟಿಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್​ಟಿಎ) ಸ್ಪಷ್ಟಪಡಿಸಿದೆ.

ಪಠ್ಯಕ್ರಮ ಬದಲಾಗಿದೆ ಎಂದು ಸುದ್ದಿ ಹರಿದಾಡುತ್ತಿರುವುದು ಏಜೆನ್ಸಿ ಗಮನಕ್ಕೆ ಬಂದಿದೆ. ಇಂಥ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಎಜೆನ್ಸಿ ಮನವಿ ಮಾಡಿದೆ.

ಇಷ್ಟಕ್ಕೂ ಎನ್​ಟಿಎ ಪಠ್ಯಕ್ರಮವನ್ನು ನಿರ್ಧರಿಸುವ ಸಂಸ್ಥೆಯಲ್ಲ. ಭಾರತೀಯ ವೈದ್ಯಕೀಯ ಮಂಡಳಿ ರೂಪಿಸುವ ಪಠ್ಯಕ್ರಮದ ಲಿಂಕ್​ಅನ್ನು ಮಾತ್ರ ಎನ್​ಟಿಎ ವಿದ್ಯಾರ್ಥಿಗಳಿಗೆ ನೀಡುತ್ತದೆ. ವಿದ್ಯಾರ್ಥಿಗಳು mciindia.org ವೆಬ್​ಸೈಟ್​ನಲ್ಲಿ ನೀಡಲಾಗಿರುವ ಪಠ್ಯಕ್ರಮವನ್ನು ಅನುಸರಿಸಬಹುದು ಎಂದು ತಿಳಿಸಿದೆ.

Also Read  2ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಂತಿಲ್ಲ - ರಾಜ್ಯ ಸರಕಾರದ ಕಾನೂನಿಗೆ ಸುಪ್ರೀಂ ಗ್ರೀನ್ ಸಿಗ್ನಲ್

ಪರೀಕ್ಷೆಯ ಅಧಿಸೂಚನೆಯಲ್ಲೂ ಇದೇ ಲಿಂಕ್​ ನೀಡಲಾಗಿದೆ ಎಂದು ಎನ್​ಟಿಎ ತಿಳಿಸಿದೆ.
ವಿವರಗಳಿಗಾಗಿ ಹಾಗೂ ಗೊಂದಲಗಳನ್ನು ಪರಿಹರಿಸಿಕೊಳ್ಳಲು ntaneet.nic.in ಅಥವಾ nta.ac.in ವೆಬ್​ಸೈಟ್​ಗೆ ಭೇಟಿ ನೀಡಬಹುದು. ದೇಶಾದ್ಯಂತ ಕೊರೋನ ಲಾಕ್​ಡೌನ್​ ಹಿನ್ನೆಲೆಯಲ್ಲಿ ನೀಟ್​ ಪರೀಕ್ಷೆಯನ್ನು ಮುಂದೂಡಲಾಗಿದೆ. ಲಾಕ್​ಡೌನ್​ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ತಿಳಿಸಿದೆ.

error: Content is protected !!
Scroll to Top