ಕೇರಳದಲ್ಲಿ ಕೊರೋನ ಸೋಂಕಿಗೆ ಮೊದಲ ಬಲಿ

(ನ್ಯೂಸ್ ಕಡಬ) newskadaba.com ಕೊಚ್ಚಿ, ಮಾ.28. ಕೊರೋನ ವೈರಸ್ ಗೆ ಬೆಚ್ಚಿಬಿದ್ದಿರುವ ಕೇರಳದಲ್ಲಿ ಕೊರೋನಾ ಸೋಂಕಿಗೆ ಮೊದಲನೇ ಬಲಿಯಾಗಿದೆ‌.

ದುಬೈಯಿಂದ ಹುಟ್ಟೂರಿಗೆ ವಾಪಸಾಗಿದ್ದ ಕೊಚ್ಚಿ ಮೂಲದ 69 ವರ್ಷದ ವೃದ್ಧರೊಬ್ಬರನ್ನು ನ್ಯುಮೋನಿಯಾ ಬಾಧಿಸಿದ ಹಿನ್ನೆಲೆಯಲ್ಲಿ ಮಾರ್ಚ್ 22 ರಂದು ಆಸ್ಪತ್ರೆಗೆ ದಾಖಲಾಗಿತ್ತು. ಹೃದಯ ರೋಗದೊಂದಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿದ್ದ ಅವರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದರೊಂದಿಗೆ ಕೊರೋನಾ ವಕ್ಕರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಲಾಕ್‌ಡೌನ್‌ ಸಡಿಲಿಕೆ ➤ 5 ರಾಜ್ಯಗಳಿಗೆ KSRTC ಸೇವೆ ಪುನಾರಂಭ

error: Content is protected !!