ಮಾ.25ರಿಂದ ದೇಶೀಯ ವಿಮಾನ ಹಾರಾಟ ಸ್ಥಗಿತ

ಹೊಸದಿಲ್ಲಿ, ಮಾ.24: ದೇಶದಲ್ಲಿ ಕೊರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದು ಮಾಡಿದ ಬೆನ್ನಲ್ಲೇ ಇದೀಗ ಕೇಂದ್ರ ಮತ್ತೊಂದು ಮಹತ್ವದ ಹೆಜ್ಜೆಯನ್ನು ಕೈಗೊಂಡಿದ್ದು, ಮಾ.25ರಂದು ದೇಶೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿ, ಕೇಂದ್ರ ವಿಮಾನಯಾನ ಸಚಿವಾಲಯ ಆದೇಶ ಹೊರಡಿಸಿದೆ.

ಎಲ್ಲಾ ವಿಮಾನಗಳು ಮಾ.24ರ ರಾತ್ರಿ 11:59ರೊಳಗೆ ವಿಮಾನಯಾನಗಳನ್ನು ನಿಲ್ಲಿಸುವಂತೆ ಆದೇಶಿಸಿದೆ.
ದೇಶದ ಒಳಗೆ ಸಂಪರ್ಕ ಕಲ್ಪಿಸುವಂತ ಹಾಗೂ ರಾಜ್ಯಗಳ ನಡುವೆ ಹಾರಾಡುವ ದೇಶೀಯ ವಿಮಾನ ಹಾರಾಟವನ್ನು ಇದೀಗ ಕೇಂದ್ರ ವಿಮಾನಯಾನ ಸಚಿವಾಲಯ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

Also Read  200 ವರ್ಷಗಳ ನಂತರ ಈ 8 ರಾಶಿಯವರು ಶ್ರೀಮಂತರಾಗುತ್ತಾರೆ ಅದೃಷ್ಟದ ಬಾಗಿಲು ತೆರೆಯಲಿದೆ

error: Content is protected !!
Scroll to Top