ಕೇರಳದ ಒಂದೇ ಕುಟುಂಬದ ಐವರಿಗೆ ಕೊರೋನ ವೈರಸ್ ಪತ್ತೆ

  • ಭಾರತದಲ್ಲಿ ಕೊರೋನ ಪೀಡಿತರ ಸಂಖ್ಯೆ 39ಕ್ಕೇರಿಕೆ

ತಿರುವನಂತಪುರಂ, ಮಾ.8: ಕೇರಳದ ಒಂದೇ ಕುಟುಂಬದ ಐವರಿಗೆ ಕೊರೋನ ಸೋಂಕು ತಗುಲಿರುವ ಕುರಿತು ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಖಚಿತಪಡಿಸಿದ್ದಾರೆ. ಆ ಮೂಲಕ ದೇಶದಲ್ಲಿ ಒಟ್ಟಾರೆಯಾಗಿ 39 ಜನರಿಗೆ ವೈರಸ್ ತಗುಲಿರುವುದು ಧೃಡಪಟ್ಟಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಇತ್ತೀಚಿಗಷ್ಟೇ ಕೇರಳದ ಮೂವರು ವ್ಯಕ್ತಿಗಳು ಇಟಲಿಗೆ ತೆರಳಿ ಹಿಂದಿರುಗಿದ್ದರು. ಇವರಿಂದ ಇಬ್ಬರು ಸಂಬಂಧಿಕರಿಗೂ ಕೂಡ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವೆ ಶೈಲಜಾ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಇಟಲಿಗೆ ತೆರಳಿದ್ದ ವ್ಯಕ್ತಿಗಳು ತಮ್ಮ ಪ್ರಯಾಣದ ವಿವರವನ್ನು ಸಮರ್ಪಕವಾಗಿ ನೀಡಿರಲಿಲ್ಲ. ಆರೋಗ್ಯ ತಪಾಸಣೆಗೂ ನಿರಾಕರಿಸಿದ್ದರು. ಆದರೆ ಮನವೊಲಿಕೆಯ ನಂತರ ಪರೀಕ್ಷೆಗೊಳಪಡಿಸಿದಾಗ ಸೋಂಕು ಇರುವುದು ಪತ್ತೆಯಾಯಿತು ಎಂದು ಅವರು ತಿಳಿಸಿದ್ದಾರೆ.

Also Read  ಕೊರೋನ ವೈರಸ್ ಹಿನ್ನೆಲೆ ಮಸೀದಿಗಳಲ್ಲಿ ಶುಕ್ರವಾರದ ನಮಾಝ್ ಸಮಯ ಮಾರ್ಪಾಡು

ತಿಂಗಳ ಹಿಂದಷ್ಟೇ ಕೇರಳದಲ್ಲಿ ಮೂವರು ವ್ಯಕ್ತಿಗಳಿಗೆ ಸೋಂಕು ತಗುಲಿರುವುದು ಖಚಿತಗೊಂಡಿತ್ತು. ಇದು ದೇಶದಲ್ಲಿ ದಾಖಲಾದ ಮೊದಲ 3 ಪ್ರಕರಣವಾಗಿತ್ತು. ಆ ಬಳಿಕ ಸೂಕ್ತ ಚಿಕಿತ್ಸೆಯಿಂದ ಆ ಮೂವರು ಸೋಂಕಿನಿಂದ ಪಾರಾಗಿದ್ದರು.

error: Content is protected !!