ಬೆಳ್ಳಾರೆ: ಮದರಂಗಿ ಶಾಸ್ತ್ರ ಮುಗಿಸಿದ ಮದುಮಗಳು ನಾಪತ್ತೆ ➤ ಬೆಳ್ಳಂಬೆಳಗ್ಗೆ ಮದುವೆ ಮನೆಯವರಿಗೆ ಬಿಗ್ ಶಾಕ್



(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.26. ಹಸೆಮನೆ ಏರಬೇಕಾಗಿದ್ದ ಮದುಮಗಳು ಬೆಳ್ಳಂಬೆಳಗ್ಗೆ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಬುಧವಾರದಂದು ನಡೆದಿದೆ.





ಕೊಳ್ತಿಗೆ ಗ್ರಾಮದ ಯುವತಿಯ ಮದುವೆಯು ಬುಧವಾರದಂದು ಪುತ್ತೂರಿನ ಪರ್ಪುಂಜದ ಹಾಲ್ ವೊಂದರಲ್ಲಿ ನಡೆಯಲಿತ್ತು. ಮಂಗಳವಾರ ರಾತ್ರಿ ಮದುರಂಗಿ ಶಾಸ್ತ್ರ ಮುಗಿಸಿಕೊಂಡು ಮದುವೆಗೆ ತಯಾರಾಗಿದ್ದ ಮದುಮಗಳು ಬೆಳ್ಳಂಬೆಳಗ್ಗೆ ಮದುವೆ ಮನೆಯಿಂದ ತಪ್ಪಿಸಿಕೊಂಡಿದ್ದಾಳೆ ಎನ್ನಲಾಗಿದೆ. ಬೆಳಿಗ್ಗೆ ಎದ್ದು ನೋಡುವಾಗ ಮದುಮಗಳು ಮನೆಯಲ್ಲಿ ಇಲ್ಲದಿರುವುದನ್ನು ತಿಳಿದ ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






error: Content is protected !!
Scroll to Top