ಇಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ

ಹೊಸದಿಲ್ಲಿ, ಫೆ.24: ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಭಾರತಕ್ಕೆ ಭೇಟಿ ನೀಡಲಿದ್ದು, ಎರಡು ದಿನ ಇಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಕೆಲವು ಒಪ್ಪಂದಗಳಿಗೆ ಭಾರತ-ಅಮೆರಿಕ ಸಹಿ ಹಾಕುವ ನಿರೀಕ್ಷೆ ಇದೆ.

ಭಾರತ ಭೇಟಿ ನಿಗದಿಯಾದ ಆರಂಭದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಸುಳಿವು ನೀಡಿದ್ದ ಟ್ರಂಪ್ ಬಳಿಕ, ಈ ಬಾರಿ ಒಪ್ಪಂದ ಏರ್ಪಡುವುದು ಅನುಮಾನ ಎಂದು ಹೇಳಿದ್ದರು.
ಹಲವು ನಿರೀಕ್ಷೆ, ಕುತೂಹಲ, ವಿವಾದಗಳಿಂದಾಗಿ ಟ್ರಂಪ್ ಭೇಟಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ.

Also Read  ಫ್ಲೈವುಡ್ ಫ್ಯಾಕ್ಟರಿಯ ಸ್ಲಾಬ್ ಕುಸಿತ- ಮೇಲ್ವಿಚಾರಕ ಮೃತ್ಯು

ಅಹಮದಾಬಾದ್‌ನಲ್ಲಿ ಟ್ರಂಪ್ ಸಂಚರಿಸುವ ಮಾರ್ಗದಲ್ಲಿರುವ ಕೊಳೆಗೇರಿಗಳಿಗೆ ಅಡ್ಡಲಾಗಿ ಬೃಹತ್ ಗೋಡೆ ನಿರ್ಮಿಸಿ, ಅಂದಗೊಳಿಸಲಾಗಿದೆ. ಈ ನಡೆ ಕೊಳಗೇರಿ ನಿವಾಸಿಗಳಲ್ಲಿ ಸಿಟ್ಟು ತರಿಸಿದೆ.

ಭಾರೀ ಬಿಗಿ ಭದ್ರತೆ: ಟ್ರಂಪ್ ಭೇಟಿ ನೀಡಲಿರುವ ಅಹ್ಮದಾಬಾದ್, ದಿಲ್ಲಿ ಹಾಗೂ ಆಗ್ರಾ ನಗರಗಳಿಗೆ ಭಾರೀ ಬಿಗಿಭದ್ರತೆ ಒದಗಿಸಲಾಗಿದೆ. ಭದ್ರತೆಗಾಗಿ 10,000 ಪೊಲೀಸರನ್ನು ನಿಯೋಜಿಸಲಾಗಿದೆ. ಇವರ ಮೇಲುಸ್ತುವಾರಿಗೆ 25 ಐಪಿಎಸ್ ಪೊಲೀಸ್ ಅಧಿಕಾರಿಗಳು ಇರಲಿದ್ದಾರೆ.

error: Content is protected !!
Scroll to Top