ಶಿರಾಡಿ: ಮೀನು ಹಿಡಿಯಲೆಂದು ತೆರಳಿದ ಯುವಕ ಕಣ್ಮರೆ ➤ ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಆರಂಭ



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.22. ಮೀನು ಹಿಡಿಯಲೆಂದು ತೆರಳಿದ‌ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ಶನಿವಾರದಂದು ನಡೆದಿದೆ.





ನಾಪತ್ತೆಯಾಗಿರುವವರನ್ನು ಶಿರಾಡಿ ಗ್ರಾಮದ ಬಾಕಿಲ ಗದ್ದೆ ನಿವಾಸಿ ಚೋಮ ಮುಗೇರ ಎಂಬವರ ಪುತ್ರ ಹರೀಶ್(26) ಎಂದು ಗುರುತಿಸಲಾಗಿದೆ. ಹರೀಶ್ ಮೀನು ಹಿಡಿಯಲೆಂದು ಗುಂಡ್ಯ ಹೊಳೆಗೆ ತೆರಳಿದ್ದು, ಆ ಬಳಿಕ ನಾಪತ್ತೆಯಾಗಿರುವುದಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಮತ್ತು ನೆಲ್ಯಾಡಿ ಹೊರಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿದ್ದು, ಹುಡುಕಾಟ ಆರಂಭಿಸಿದ್ದಾರೆ.






error: Content is protected !!
Scroll to Top