ಪ್ರಮಾಣ ವಚನ ಸ್ವೀಕರಿಸಿದ ದಿನವೇ ಬಿಗ್ ಶಾಕ್ ನೀಡಿದ ಬಿಜೆಪಿ ಸರಕಾರ

(ನ್ಯೂಸ್ ಕಡಬ)newskadaba.com, ಫೆ. 7. ರಾಜ್ಯದ ಬಿಜೆಪಿಯ ನೂತನ ಸಚಿವರಿಗೆ ಮೊದಲ ದಿನವೇ ಬಿಗ್ ಟಾಸ್ಕ್ ನೀಡಲಾಗಿದ್ದು, ರಾಜ್ಯ ಬಿಜೆಪಿ ಕಚೇರಿಯಲ್ಲಿ ವಾರದಲ್ಲಿ ಒಂದು ದಿನ 2 ಗಂಟೆ ಇರಲೇಬೇಕೆಂದು ಸೂಚನೆ ನೀಡಲಾಗಿದೆ.

ನಿಮ್ಮ ಕಚೇರಿಗಳಲ್ಲಿಯೂ ಕೆಲಸ ಮಾಡುವಂತೆ ಹಾಗೂ ಪಕ್ಷದ ಕಚೇರಿಗೂ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಬಿಜೆಪಿ ಕಚೇರಿಯಿಂದ ನೂತನ ಸಚಿವರಿಗೆ ಸಂದೇಶ ನೀಡಲಾಗಿದೆ. ಸಚಿವರಾದ ನಾರಾಯಣಗೌಡ, ಶಿವರಾಮ್ ಹೆಬ್ಬಾರ್, ಸುಧಾಕರ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದಾರೆ. ಪಕ್ಷದ ಕಚೇರಿಗೆ ಆಗಮಿಸಿದ ನೂತನ ಸಚಿವರಿಗೆ ಆತ್ಮೀಯ ಸ್ವಾಗತ ನೀಡಲಾಗಿದ್ದು ಇದೇ ವೇಳೆ ಪಕ್ಷದ ಕಚೇರಿಯಲ್ಲಿ ವಾರದಲ್ಲಿ ಒಮ್ಮೆ 2 ಗಂಟೆ ಕಡ್ಡಾಯವಾಗಿರಲು ಸೂಚನೆ ನೀಡಲಾಗಿದೆ.

Also Read  ಕುಕ್ಕೆ ಸುಬ್ರಹ್ಮಣ್ಯ : ಸಿದ್ದಗೊಳ್ಳುತ್ತಿದೆ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ

error: Content is protected !!