ಪೌರತ್ವ ಕಾಯ್ದೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ಕೇರಳ

  • ಸಿಎಎ ವಿರುದ್ಧ ಕೋಟ್೯ ಮೆಟ್ಟಿಲೇರಿದ ಮೊದಲ ರಾಜ್ಯ

ಹೊಸದಿಲ್ಲಿ, ಜ.14: ಪಿಣರಾಯಿ ವಿಜಯನ್‌ ನೇತೃತ್ವದ ಕೇರಳ ಸರಕಾರವು ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ  ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಮೂಲಕ ಸಿಎಎ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮೊದಲ ರಾಜ್ಯ ಎನಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ನೀಡಲಾಗಿರುವ ಮೂಲಭೂತ ಹಕ್ಕುಗಳಲ್ಲಿ ಒಂದಾದ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಎಂದು ಅರ್ಜಿಯಲ್ಲಿ ತಿಳಿಸಿದೆ. ಅಲ್ಲದೆ ಶಾಸಕಾಂಗ ಸಭೆದಯಲ್ಲಿ ಪೌರತ್ವ ಕಾಯಿದೆ ವಿರುದ್ಧ ಗೊತ್ತುವಳಿ ಮಂಡನೆ ಮಾಡಿದ ಮೊದಲ ರಾಜ್ಯ ಕೂಡ ಕೇರಳವಾಗಿದೆ. ಹಲವಾರು ರಾಜ್ಯಗಳು ಪೌರತ್ವ ಕಾಯಿದೆ ವಿರುದ್ಧ ಆಕ್ಷೇಪಣೆ ಎತ್ತಿವೆ.

ಕೇರಳ ಸರಕಾರವು ಪೌರತ್ವ ಕಾಯಿದೆ ಜತೆಗೆ ಪಾಸ್‌ಪೋರ್ಟ್‌ ಕಾಯಿದೆ ಮತ್ತು ಫಾರಿನರ್ಸ್‌ ಕಾಯಿದೆ ವಿರುದ್ಧವೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ. ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಹೊಸ ಪೌರತ್ವ ಕಾಯಿದೆಯು ಸಂವಿಧಾನದ ಮೂಲಭೂತ ಹಕ್ಕುಗಳಾದ 14, 21, 25ನೇ ವಿಧಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದೆ.

error: Content is protected !!

Join the Group

Join WhatsApp Group