ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ದಿಲ್ಲಿಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಬಂಧನ

ಹೊಸದಿಲ್ಲಿ, ಡಿ.21: ಭಾರೀ ವಿವಾದ ಎಬ್ಬಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದಿಲ್ಲಿಯ ಜಾಮೀಯಾ ಮಸೀದಿಯಲ್ಲಿ ನಡೆದಿದ್ದ ಭಾರೀ ಪ್ರತಿಭಟನೆಗೆ ತನ್ನ ಬೆಂಬಲವನ್ನು ಸೂಚಿಸಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್‌ರನ್ನು ದಿಲ್ಲಿಯಲ್ಲಿ ಶನಿವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಸೂಚನೆಯನ್ನೂ ಧಿಕ್ಕರಿಸಿ ಸಾವಿರಾರು ಪ್ರತಿಭಟನಕಾರರು ದಿಲ್ಲಿಯ ಜಾಮೀಯಾ ಮಸೀದಿಯಿಂದ ಪ್ರತಿಭಟನೆ ಹೊರಟಿದ್ದರು. ಬಳಿಕ ಪೊಲೀಸರು ಪ್ರತಿಭಟನಕಾರರನ್ನು ದಿಲ್ಲಿ ಗೇಟ್ ಬಳಿ ತಡೆಯಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಕಾರರ ನಡುವೆ ಇದ್ದ ಚಂದ್ರಶೇಖರ್ ಆಝಾದ್ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ತನ್ನ ಬೆಂಬಲವನ್ನು ಸೂಚಿಸಿದ್ದರು.

Also Read  ಬಜೆಟ್ ಬಳಿಕ ಚಿನ್ನದ ದರ ಕುಸಿತ

 

error: Content is protected !!
Scroll to Top