ಪೌರತ್ವ ಕಾನೂನು ಪರಿಶೀಲನೆಯ ಬಗ್ಗೆ ಅಮಿತ್ ಶಾ ಭರವಸೆ ➤ ಮೇಘಾಲಯ ಸಿಎಂ ಸಾಂಗ್ಮಾ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.15. ಹೊಸದಾಗಿ ಜಾರಿಗೆ ಬಂದ ಪೌರತ್ವ ಕಾನೂನಿಗೆ ಸಂಬಂಧಿಸಿದಂತೆ ಮೇಘಾಲಯದ ಕಳವಳಗಳನ್ನು ಪರಿಶೀಲಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹೇಳಿದ್ದಾರೆ.

ಶಿಲ್ಲಾಂಗ್‌ನಿಂದ 250 ಕಿ.ಮೀ ದೂರದಲ್ಲಿರುವ ವಿಲಿಯಮ್‌ನಗರ ಪಟ್ಟಣದಲ್ಲಿ, ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಚಾಪರ್‌ನಿಂದ ಇಳಿಯುತ್ತಿದ್ದಾಗ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಾಂಗ್ಮಾ ಅವರನ್ನು ಸುತ್ತುವರಿದಿದ್ದು, ಪೊಲೀಸರು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಈ ವೇಳೆ ಅವರು ಮೇಲಿನಂತೆ ನುಡಿದಿದ್ದಾರೆ. ಮೇಘಾಲಯವು ಈಶಾನ್ಯ ರಾಜ್ಯಗಳಲ್ಲಿ ಒಂದಾಗಿದ್ದು, ಪೌರತ್ವ ಕಾನೂನಿನ ವಿರುದ್ಧ ವ್ಯಾಪಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಕಲ್ಪಿಸಲು ಕಾನೂನಿನನ್ವಯ ಹೊಸ ಅವಕಾಶ ಸಿಕ್ಕಿದೆ.

Also Read  ಒಂದೇ ಬೈಕ್‌ ನಲ್ಲಿ 6 ಮಂದಿ ತೆರಳುತ್ತಿದ್ದಾಗ ಢಿಕ್ಕಿ ಹೊಡೆದ ಟೆಂಪೋ !       ➤ ನಾಲ್ವರು ದುರ್ಮರಣ

ನೂತನ ಕಾನೂನಿನ ವಿರುದ್ದ ರಾಜ್ಯ ರಾಜಧಾನಿ ಶಿಲ್ಲಾಂಗ್ ಮತ್ತು ಇತರ ಪ್ರದೇಶಗಳಲ್ಲಿ ವ್ಯಾಪಕ ಪ್ರತಿಭಟನೆ ಮತ್ತು ಹಿಂಸಾಚಾರದ ನಂತರ, ರಾಜ್ಯದ ಕೆಲವು ಭಾಗಗಳು ವಾರದ ಬಹುಪಾಲು ಕರ್ಫ್ಯೂಗೆ ಒಳಪಟ್ಟಿವೆ. ಶಿಲ್ಲಾಂಗ್‌ನಲ್ಲಿ ಕರ್ಫ್ಯೂ ಇನ್ನೂ ಜಾರಿಯಲ್ಲಿದೆ, ಆದರೂ ನೆಲದ ಪರಿಸ್ಥಿತಿಯ ಸುಧಾರಣೆಯ ನಂತರ ಸಂಜೆ ಅದನ್ನು ಸಡಿಲಿಸಲಾಗಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಹಿ ಹಾಕಿದ ಒಂದು ದಿನದ ನಂತರ ಶುಕ್ರವಾರದಿಂದ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ರಾಜ್ ಭವನದ ಬಳಿ ಪೊಲೀಸರ ಮೇಲೆ ಕಲ್ಲು ಎಸೆದ ನಂತರ ಭಾರೀ ಜನಸಮೂಹವನ್ನು ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಚದುರಿಸಿದ್ದಾರೆ.

Also Read  ರೇಬಿಸ್ ಲಸಿಕೆಗೆ ತೆರಳಿದ ವ್ಯಕ್ತಿಗೆ ಕೋವಿಡ್ ಲಸಿಕೆ ಹಾಕಿದ ಸಿಬ್ಬಂದಿಗಳು..!

error: Content is protected !!
Scroll to Top