ನಾಳೆ(ಡಿ.01) ಪಂಜದಲ್ಲಿ MRF ನ್ಯಾಷನಲ್ ಬೈಕ್ ರೇಸ್ ➤ ರಾಷ್ಟ್ರಮಟ್ಟದ ಕ್ರೀಡಾಪಟುಗಳಿಂದ ಸಾಹಸಮಯ ರ್ಯಾಲಿ

(ನ್ಯೂಸ್ ಕಡಬ) newskadaba.com ಕಡಬ, ನ.30. MRF ಮೊಗ್ರಿಪ್ ನ್ಯಾಷನಲ್ ಬೈಕ್ ರ್ಯಾಲಿ ಚಾಂಪಿಯನ್ ಶಿಪ್ ಬೈಕ್ ರೇಸ್ ‘ಶಿವಾಜಿ ಯುವಕ ಮಂಡಲ ಕೂತ್ಕುಂಜ’ ಇದರ ಸಹಯೋಗದೊಂದಿಗೆ ಡಿಸೆಂಬರ್ 01 ಭಾನುವಾರದಂದು ಪಂಜದಲ್ಲಿ ನಡೆಯಲಿದೆ.

ಬೆಳಿಗ್ಗೆ 7.00 ಘಂಟೆಗೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಆರಂಭಗೊಳ್ಳಲಿರುವ ಬೈಕ್ ರ‌್ಯಾಲಿಯು ಮಂಚಿಕಟ್ಟೆ, ಪಂಜದ ಬೈಲು, ಮಹೇಶ್ ಕರಿಕ್ಕಳರವರ ರಬ್ಬರ್ ತೋಟದ ಮೂಲಕ ಸಾಗಿ ಕರಿಕ್ಕಳ ಜಂಕ್ಷನ್, ಪಂಬೆತ್ತಾಡಿ, ಜಾಕೆ ಮಾರ್ಗವಾಗಿ ಚೀಮುಳ್ಳು, ಜಳಕದಹೊಳೆ, ಪಳಂಗಾಯ, ವಾಟೆಕಜೆ, ಕೂತ್ಕುಂಜ, ಅಜ್ಜಿಹಿತ್ಲು, ಗಣಪತಿ ಕಟ್ಟೆ, ಅಡ್ಡತೋಡು ಮೂಲಕ ಸಾಗಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಮುಂಭಾಗದಲ್ಲಿ ಸಮಾಪ್ತಿಗೊಳ್ಳಲಿದೆ.

Also Read  ಲುಂಗಿ, ಬೆಡ್ ಶೀಟ್ ಬಳಸಿ ಪರಾರಿಯಾದ ಐವರು ಕೈದಿಗಳು..!

ಮೂರು ಸುತ್ತಿನ ಬೇರೆ ಬೇರೆ ಗ್ರೂಪಿನ ಚಾಂಪಿಯನ್ ಶಿಪ್ ಈ ಒಂದು ಟ್ರ್ಯಾಕ್’ನಲ್ಲಿ ನಡೆಯಲಿದ್ದು,
ರಾಷ್ಟ್ರೀಯ ಮಟ್ಟದ ಬೈಕ್ ರ‌್ಯಾಲಿಪಟುಗಳು ಈ ರ‌್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

error: Content is protected !!
Scroll to Top