ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಪೊಲೀಸ್ ಇಲಾಖೆಗೆ ರಾಜೀನಾಮೆ ➤ ಉಡುಪಿ, ಚಿಕ್ಕಮಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ‘ಕರ್ನಾಟಕದ ಸಿಂಗಂ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.28. ಖಡಕ್ ಐಪಿಎಸ್ ಅಧಿಕಾರಿ, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಮಂಗಳವಾರದಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜನಪರ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ತನ್ನ ವಿಶಿಷ್ಟ ಸೇವೆಯಿಂದಾಗಿ ‘ಕರ್ನಾಟಕದ ಸಿಗಂ’ ಎಂದೇ ಖ್ಯಾತರಾಗಿದ್ದ ಅಣ್ಣಾಮಲೈ ತನ್ನ ರಾಜೀನಾಮೆ ಪತ್ರವನ್ನು ಡಿಜಿಐಜಿಪಿಗೆ ಸಲ್ಲಿಸಿದ್ದಾರೆ. ಡಿಜಿಪಿ ಮೂಲಕ ರಾಜ್ಯ ಗೃಹ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ರವಾನೆಯಾಗಲಿದ್ದು, ಆ ಬಳಿಕ ಗೃಹ ಕಾರ್ಯದರ್ಶಿಗಳು ಅಲ್ಲಿಂದ ಕೇಂದ್ರ ಯುಪಿಎಸ್ಸಿಗೆ ರಾಜೀನಾಮೆ ಪತ್ರ ರವಾನಿಸಲಿದ್ದಾರೆ.

Also Read  ಆರೆಸ್ಸೆಸ್ ಹಾಗೂ ಎಸ್ಡಿಪಿಐ ನಡುವೆ ಘರ್ಷಣೆ ➤ 8 ಮಂದಿಯ ಬಂಧನ

error: Content is protected !!
Scroll to Top