(ನ್ಯೂಸ್ ಕಡಬ) newskadaba.com ಮುಂಬೈ, ಆ.01. ನಿಮ್ಮ ಮಕ್ಕಳು ಇಂಟರ್ನೆಟ್‍ನಲ್ಲಿ ಹೆಚ್ಚು ಹೊತ್ತು ಆಟ ಆಡುತ್ತಿರುತ್ತಾರಾ…? ಇಂಟರ್ನೆಟ್ ನ ಹುಚ್ಚಿನಲ್ಲಿ ನಿಮ್ಮ ಮಗ ಪ್ರಾಣವನ್ನೇ ತೆಗೆದುಕೊಳ್ಳಬಹುದು. ಬ್ಲೂ ವೇಲ್ ಚಾಲೆಂಜ್ ಎಂಬ ಆನ್ ಲೈನ್ ಕ್ರೀಡೆಗೆ ಬಲಿಯಾಗಿ ಪ್ರಾಣತೆತ್ತ ದೇಶದ ಮೊದಲ ಬಾಲಕ ಈ ಮನ್ ಪ್ರೀತ್ ಸಹಾನ್ಸ್.
ಮುಂಬೈಯಿಯ ಪೂರ್ವ ಅಂಧೇರಿಯ ಮನ್ ಪ್ರೀತ್ ಕೌರ್ ಎಂಬ 14 ವರ್ಷದ ಹುಡುಗ ಮುಂಬೈನಲ್ಲಿ ತನ್ನ ಪೋಷಕರ ಜೊತೆ ವಾಸವಿದ್ದ ಕಟ್ಟಡದಿಂದ ಜಿಗಿದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇದಕ್ಕೆ ಕಾರಣವಾಗಿದ್ದು ಇಂಟರ್ನೆಟ್. ರಷ್ಯಾ ದೇಶದಲ್ಲಿ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಾಕಿದ ಈ ಹುಚ್ಚು ಕ್ರೀಡೆಗೆ ವಿಶ್ವದಾದ್ಯಂತ ಅದೆಷ್ಟೋ ಮಂದಿ ಬಲಿಯಾಗುತ್ತಿದ್ದಾರೆ. ಬ್ಲೂ ವೇಲ್ ಚಾಲೆಂಜ್ ಅಂದರೆ, ಸಾಮಾಜಿಕ ಜಾಲತಾಣಗಳಲ್ಲಿ ನಿಮಗೆ 50 ಟಾಸ್ಕ್ ಗಳನ್ನ ನೀಡಲಾಗುತ್ತೆ. ಇಂತಹ ಟಾಸ್ಕ್ ಗಳಿಗೆ ಎಳೆ ಮಕ್ಕಳು ಬಲಿಪಶುಗಳಾಗ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ತಮ್ಮ ಕೈಗಳನ್ನ ಹರಿತವಾದ ಆ ಯುದ್ಧಗಳಿಂದ ವೇಲ್ ಮೀನಿನ ರೀತಿ ಚಿತ್ರ ಬಿಡಿಸಲು ಆದೇಶ ನೀಡ್ತಾರೆ. ಅಂತಹ ಎಲ್ಲಾ ಟಾಸ್ಕ್ ಗಳನ್ನ ಮಾಡಿದ ಮೇಲೆ ಕೊನೆಯಲ್ಲಿ ಬರುವುದೇ ಮುಗ್ಧ ಮಕ್ಕಳ ಜೀವ ತೆಗೆಯುವ ಟಾಸ್ಕ್. ಅದು ಸೂಸೈಡ್. ಹೌದು, ಕೊನೆಯ ಟಾಸ್ಕ್ ನಲ್ಲಿ ಏಳು ಅಂತಸ್ತಿನ ಕಟ್ಟಡದಿಂದ ಬೀಳಬೇಕು. ಅದರಲ್ಲೂ ಬೀಳುವ ಮುನ್ನ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಕು ಎಂದು ಆದೇಶ ನೀಡಲಾಗಿರುತ್ತದೆ. ಇಂತಹ ಹುಚ್ಚು ಕ್ರೀಡೆಗೆ 14 ವರ್ಷದ ಮನ್ ಪ್ರೀತ್ ಸಹಾನ್ಸ್ ಬಲಿಯಾಗಿದ್ದಾನೆ.