(ನ್ಯೂಸ್ ಕಡಬ) newskadaba.com.ನವದೆಹಲಿ,ಜ.10. ಭಾರತೀಯ ರೈಲ್ವೆ ಸೇವೆಯನ್ನು ಉನ್ನತ ದರ್ಜೆಗೆ ಏರಿಸಲು ಶ್ರಮಿಸುತ್ತಿರುವ ಕೇಂದ್ರ ಸರ್ಕಾರ, ಭಾರತದ ರೈಲ್ವೆ ಹೊಸ ಟಚ್ ಕೊಡಲು ಮುಂದಾಗಿದೆ. ಭಾರತದ ಕೆಲವು ರೈಲುಗಳಲ್ಲಿ ಪ್ರಯಾಣಿಕರು, ತಮ್ಮ ಪ್ರಯಾಣದ ಅವಧಿಯಲ್ಲೇ, ತಮಗೆ ಬೇಕಿರುವ ಸೌಂದರ್ಯ ವರ್ಧಕ ಉತ್ಪನ್ನಗಳು, ಫಿಟ್‌ನೆಸ್ ಹಾಗೂ ಅಡುಗೆ ಮನೆಗೆ ಅಗತ್ಯವಿರುವ ಪರಿಕರಗಳನ್ನು ಖರೀದಿಸಬಹುದಾಗಿದೆ. ಈ ಮೂಲಕ ಭಾರತದ ಕೆಲವು ರೈಲುಗಳು ಶಾಪಿಂಗ್ ಮಾಲ್‌ಗಳ ರೂಪ ಪಡೆಯಲಿವೆ.
16 ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ 5 ವರ್ಷಗಳ ಕಾಲ ಸೌಂದರ್ಯವರ್ಧಕ, ಫಿಟ್‌ನೆಸ್ ಮತ್ತು ಕಿಚನ್ ಅಪ್ಲೈಯನ್ಸಸ್ ಸೇರಿ ಇತರ ವಸ್ತುಗಳ ಮಾರಾಟಕ್ಕೆ ಖಾಸಗಿ ಕಂಪನಿಯೊಂದಕ್ಕೆ ಮುಂಬೈ ವಿಭಾಗದ ಪಶ್ಚಿಮ ರೈಲ್ವೆ ಗುತ್ತಿಗೆ ನೀಡಿದೆ. ಆದರೆ, ಈ ಗುತ್ತಿಗೆ ಪಡೆದ ಕಂಪನಿಯು, ರೈಲುಗಳಲ್ಲಿ ಆಹಾರ ಪದಾರ್ಥಗಳು, ಸಿಗರೇಟು, ಗುಟ್ಕಾ ಅಥವಾ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.