ಎಲ್ಲಾ ಸವಾಲನ್ನು ಎದುರಿಸಲು ಭಾರತೀಯ ಸೇನೆ ಸಿದ್ಧ: ಅರುಣ್ ಜೇಟ್ಲಿ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜು.28. ನೆರೆಯ ದೇಶಗಳಿಂದ ತೊಂದರೆ ಎದುರಾದರೆ ಯಾವುದೇ ಸಂದರ್ಭದಲ್ಲಿ ಎದುರಾಗುವ ಸವಾಲನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಜೇಟ್ಲಿ, ಭಾರತದ ಸೇನೆಗೆ ಶಸ್ತ್ರಾಸ್ತ್ರಗಳ ಕೊರತೆಯಿದೆ ಎಂದು ನಿಯಂತ್ರಕರು ಮತ್ತು ಮಹಾಲೆಕ್ಕಪಾಲರು ವರದಿ ನೀಡಿರುವ ಬಗ್ಗೆ ಉಲ್ಲೇಖಿಸಿ, ಯಾವುದೇ ಆಕಸ್ಮಿಕ ಘಟನೆಯನ್ನೂ ಎದುರಿಸಲು ಸೇನಾಪಡೆಗಳು ಸನ್ನದ್ಧವಾಗಿವೆ. ಶಸ್ತ್ರಾಸ್ತ್ರಗಳ ಕೊರತೆ ಕಂಡುಬಂದರೆ ಕೂಡಲೇ ಅದನ್ನು ಸರಿದೂಗಿಸಲಾಗುವುದು ಎಂದರು. ದೇಶದ ಭದ್ರತೆಗೆ ಅಗತ್ಯವಿರುವ ಶಸ್ತ್ರಾಸ್ತ್ರದ ವಿವರ ನೀಡುವಂತೆ ಸದಸ್ಯರು ಕೇಳಿದಾಗ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ವಿವರವನ್ನು ನೀಡಲಾಗದು ಎಂದು ಸಚಿವರು ಉತ್ತರಿಸಿದರು.

error: Content is protected !!

Join the Group

Join WhatsApp Group