ಕಡಬ: ಮೋದಿಕೇರ್ ಸ್ವದೇಶಿ ವಸ್ತುಗಳ ವಿತರಣಾ ಕೇಂದ್ರ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಡಿ.10. ಮೋದಿಕೇರ್ ಸ್ವದೇಶಿ ವಸ್ತುಗಳ ನೂತನ ವಿತರಣಾ ಕೇಂದ್ರವು ಕಡಬದ ಸೈಂಟ್ ಜೋಕಿಮ್ಸ್ ವಾಣಿಜ್ಯ ಸಂಕೀರ್ಣದಲ್ಲಿ ರವಿವಾರದಂದು ಉದ್ಘಾಟನೆಗೊಂಡಿತು.

ಲಿಲ್ಲಿ  ಲೋಬೋ ಅರ್ಪಾಜೆ ಅವರು ಕೇಂದ್ರವನ್ನು ಉದ್ಘಾಟನೆಗೈದರು. ದೀಪ ಬೆಳಗಿಸಿ ಮಾತನಾಡಿದ ಮೋದಿಕೇರ್ ಕ್ರೌನ್ ಡೈಮಂಡ್ ಡೈರೆಕ್ಟರ್ ದಿನಕರ ಬಿ.ಎಸ್. ಅವರು ದೇಶದ ಆರ್ಥಿಕ ಸಂಪತ್ತು ದೇಶದೊಳಗೆಯೇ ಸದ್ಬಳಕೆಯಾಗುವುದರೊಂದಿಗೆ ಪ್ರತಿಯೊಬ್ಬರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎನ್ನುವ ಸದುದ್ದೇಶದಿಂದ ಮೋದಿಕೇರ್ ಸಂಸ್ಥೆ ಕೆಲಸ ಮಾಡುತ್ತಿದೆ. ಆರೋಗ್ಯಕ್ಕೆ ಹಾನಿಕರವಲ್ಲದ ಸ್ವದೇಶಿ ದಿನಬಳಕೆಯ ವಸ್ತುಗಳನ್ನು ಸ್ವತಃ ಬಳಸುವುದರೊಂದಿಗೆ ಪ್ರತಿಯೊಂದು ಮನೆಗಳಿಗೂ ತಲುಪಿಸುವ ನಮ್ಮ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಿ ಆರ್ಥಿಕವಾಗಿಯೂ ಸುದೃಢರಾಗುವಂತೆ ಅವರು ಕರೆ ನೀಡಿದರು. ಆಶೀರ್ವಚನ ನೀಡಿದ ಕಡಬ ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರು ವಂ|ರೊನಾಲ್ಡ್ ಲೋಬೋ ಅವರು ಪ್ರಾಮಾಣಿಕತೆ, ಸೇವೆ ಮತ್ತು ಸದುದ್ದೇಶದ ಕೆಲಸಗಳಿಗೆ ದೇವರ ಕೃಪೆ ಎಂದಿಗೂ ಇದೆ. ನೂತನ ಸಂಸ್ಥೆಯ ಉತ್ತಮವಾಗಿ ಅಭಿವೃದ್ಧಿ ಹೊಂದುವುದರೊಂದಿಗೆ ಅದರಲ್ಲಿ ಶ್ರಮಿಸುವವವರಿಗೂ ಯಶಸ್ಸು ಲಭಿಸಿಲಿ ಎಂದು ಹಾರೈಸಿದರು. ಕಡಬ ರಹ್ಮಾನಿಯ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷ ಎಸ್.ಅಬ್ದುಲ್‍ಖಾದರ್ ಹಾಗೂ ಕೊಕ್ಕಡ ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈ ಪೆರ್ಲ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಕಡಬ ಸೈಂಟ್ ಜೋಕಿಮ್ಸ್ ಚರ್ಚ್‍ನ ಪಾಲನ ಸಮಿತಿಯ ಉಪಾಧ್ಯಕ್ಷ ಲೂವಿಸ್ ಮಸ್ಕರೇನ್ಹಸ್, ಕಡಬ ಮೋದಿಕೇರ್ ಟೀಮ್‍ನ ಸದಸ್ಯರಾದ ನವೀನ್ ಗೋಖಲೆ, ಕಿರಣ್‍ಕುಮಾರ್ ವಿ., ಸತೀಶ್ ಪಂಜ, ಶ್ರೀಲತಾ ಕೆ., ಪೂರ್ಣಿಮಾ ಪಿ., ಪ್ರತಿಮಾ ಆರ್. ಬಿ., ಸೌಮ್ಯಾ ಎಂ., ದಿವ್ಯಾ, ಮ್ಯಾಥ್ಯೂ ಇ.ಜಿ., ಲೀಲಾವತಿ, ಫಿಲೋಮಿನಾ ಬಿ.ಎಂ., ಫ್ರಾನ್ಸಿಸ್ ಬಲ್ಯ, ಜಾನ್ ವೇಗಸ್ ಮುಂತಾದವರು ಉಪಸ್ಥಿತರಿದ್ದರು. ಮೋದಿಕೇರ್ ಡೈರೆಕ್ಟರ್ ರಾಜೇಶ್ ಎನ್. ಸ್ವಾಗತಿಸಿ, ನಿರೂಪಿಸಿದರು. ಸಂಸ್ಥೆಯ ಪಾಲುದಾರ ಸಿಲ್ವೆಸ್ಟರ್ ಪಿಂಟೋ ವಂದಿಸಿದರು.

error: Content is protected !!

Join the Group

Join WhatsApp Group