ನಾಳೆಯಿಂದ ಶಿರಾಡಿ ಘಾಟ್ ನಲ್ಲಿ ಲಾರಿ ಸೇರಿದಂತೆ ಘನ ವಾಹನಗಳ ಸಂಚಾರ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ನ.14. ಕಳೆದ ಕೆಲವು ತಿಂಗಳುಗಳಿಂದ ಲಾರಿ, ಕಂಟೇನರ್ ಸೇರಿದಂತೆ ಘನ ವಾಹನಗಳ ಸಂಚಾರಕ್ಕೆ ತಡೆಯಾಗಿದ್ದ ಶಿರಾಡಿ ಘಾಟ್ ರಸ್ತೆಯು ನಾಳೆಯಿಂದ (ನವೆಂಬರ್ 15) ಎಲ್ಲಾ ರೀತಿಯ ಘನ ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಶಿರಾಡಿ ಘಾಟ್ ರಸ್ತೆಯ ಕ್ಷಮತೆ ಹಾಗೂ ಸುರಕ್ಷತೆಯ ಬಗ್ಗೆ ಈಗಾಗಲೇ ದಕ್ಷಿಣ ಕನ್ನಡ, ಹಾಸನ ಜಿಲ್ಲಾಧಿಕಾರಿಗಳು ಹಾಗೂ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಚರ್ಚಿಸಿದ್ದು, ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟ್ ರಸ್ತೆಯು ಸದೃಢವಾಗಿರುವುದರಿಂದ ನಾಳೆಯಿಂದ ಘನ ವಾಹನಗಳ ಸಂಚಾರಕ್ಕೆ ತೆರೆದುಕೊಳ್ಳಲಿದೆ. ನವೆಂಬರ್ 12 ರಿಂದ ಶಿರಾಡಿ ಘಾಟ್ ರಸ್ತೆಯು ತೆರೆದುಕೊಳ್ಳಲಿದೆ ಎಂದು ಈ ಹಿಂದೆ ಜಿಲ್ಲಾಡಳಿತವು ಹೇಳಿಕೆ ನೀಡಿದ್ದರಿಂದಾಗಿ ಗುಂಡ್ಯವರೆಗೆ ಆಗಮಿಸಿದ್ದ ಲಾರಿ ಚಾಲಕರು ಗುಂಡ್ಯ ಗಡಿಭಾಗದಲ್ಲಿ ಅನ್ನ ನೀರಿಲ್ಲದೆ ಪರದಾಡುತ್ತಿದ್ದಾರೆ.

Also Read  5ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಅಂಶಿಕಾ ಜೈನ್

error: Content is protected !!