
(ನ್ಯೂಸ್ ಕಡಬ) newskadaba.com, ನ. 07 .ಕೆಎಂಎಫ್ ಹಾಲಿನ ಮತ್ತು ಮೊಸರಿನ ದರ ಏರಿಕೆಯ ಲಾಭ ಪಡೆದಿರುವ ಗುಜರಾತ್ ಮೂಲದ ಅಮೂಲ್ ಸಂಸ್ಥೆ, ತನ್ನ 900 ಗ್ರಾಂ ಮೊಸರಿನ ಪ್ಯಾಕೆಟ್ ಬೆಲೆಯನ್ನು ಕೇವಲ ₹58 ಕ್ಕೆ ನಿಗದಿಪಡಿಸಿ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಆರಂಭಿಸಿದೆ.
ಇತ್ತೀಚೆಗೆ ಕೆಎಂಎಫ್ ಹಾಲಿನ ಹಾಗೂ ಮೊಸರಿನ ದರವನ್ನು ಗಮನಾರ್ಹವಾಗಿ ಏರಿಕೆ ಮಾಡಿದ್ದು, ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಲೀಟರ್ ಮೊಸರಿನಲ್ಲಿ ₹2 ಇಳಿಕೆ ಮಾಡಲು ನಿರ್ಧರಿಸಿದ್ದರೂ, ಸ್ಪರ್ಧೆ ತಪ್ಪಿಲ್ಲ.ಅಮೂಲ್ ಜತೆಗೆ ಹಟ್ಸನ್, ಮಿಲ್ಕಿಮಿಸ್ಟ್ ಹಾಗೂ ಕಂಟ್ರಿ ಡಿಲೈಟ್ಸ್ ನಂತಹ ಇതര ಹೊರರಾಜ್ಯ ಹಾಗೂ ಖಾಸಗಿ ಬ್ರಾಂಡ್ಗಳು ಕಡಿಮೆ ದರದ ಅಸ್ತ್ರ ಬಳಸಿ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ.ಹೋಟೆಲ್ಗಳು, ಕ್ಯಾಟರಿಂಗ್ ಉದ್ಯಮಗಳು ಹಾಗೂ ಮಧ್ಯಮ ವರ್ಗದ ಗ್ರಾಹಕರು ಕಡಿಮೆ ದರದತ್ತ ಆಕರ್ಷಿತರಾಗುವ ಸಾಧ್ಯತೆಯಿರುವುದರಿಂದ, ನಂದಿನಿ ಬ್ರಾಂಡ್ಗೆ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊಡ್ಡ ಸವಾಲು ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.




