
(ನ್ಯೂಸ್ ಕಡಬ) newskadaba.com, ನ 07 . ನವದೆಹಲಿ: ಇತರ ಹಿಂದುಳಿದ ವರ್ಗಗಳ ಮೀಸಲಾತಿಯ ಕ್ರೀಮಿ ಲೇಯರ್ ವ್ಯಾಪ್ತಿ ನಿರ್ಧರಿಸಲು ಕೇವಲ ಪೋಷಕರ ವೇತನ ಅಥವಾ ಆದಾಯವನ್ನಷ್ಟೇ ಮಾನದಂಡವಾಗಿ ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ಈ ಸ್ಪಷ್ಟನೆ ನೀಡಿದೆ.
ಕ್ರೀಮಿ ಲೇಯರ್ ನಿರ್ಧರಿಸುವಾಗ ಪೋಷಕರ ಹುದ್ದೆಯ ವರ್ಗ, ಸೇವಾ ಸ್ಥಿತಿ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ಪರಿಗಣಿಸುವುದು ಅತ್ಯಗತ್ಯ.ಖಾಸಗಿ ಮತ್ತು ಪಿಎಸ್ಯು ನೌಕರರ ಮಕ್ಕಳನ್ನು ಕೇವಲ ‘ವೇತನ’ದ ಆಧಾರದ ಮೇಲೆ ಕ್ರೀಮಿ ಲೇಯರ್ ವ್ಯಾಪ್ತಿಗೆ ತರುವುದು ಸಂವಿಧಾನದ ವಿಧಿ 14 ಹಾಗೂ 16ರ ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.
ಯುಪಿಎಸ್ಸಿ ಸಿವಿಲ್ ಸರ್ವಿಸಸ್ 2025ರ ಬ್ಯಾಚ್ನ ಸೇವಾ ಹಂಚಿಕೆ ಪ್ರಕ್ರಿಯೆ ಬಾಕಿ ಇರುವುದರಿಂದ, ಈ ಹೊಸ ತೀರ್ಪಿನ ಅಡಿಯಲ್ಲೇ ಒಬಿಸಿ ಕ್ರೀಮಿ ಲೇಯರ್ ನಿರ್ಧಾರವಾಗಲಿದೆ.ಈಗಾಗಲೇ ಮುಕ್ತಾಯಗೊಂಡಿರುವ ನೇಮಕಾತಿಗಳು, ಹಿರಿತನ ಅಥವಾ ಪ್ರಮೋಷನ್ಗಳನ್ನು ಮರುಪರಿಶೀಲಿಸಲು ಈ ತೀರ್ಪು ಅನ್ವಯಿಸುವುದಿಲ್ಲ.




