ಕೆಎಂಎಫ್‌ನಿಂದ ಮತ್ತೊಂದು ಶಾಕ್: ನಾಳೆಯಿಂದಲೇ ರಾಜ್ಯದಲ್ಲಿ ಮೊಸರು ದರ ಹೆಚ್ಚಳ!

(ನ್ಯೂಸ್‌ ಕಡಬ) newskadaba.com, ಅ .31.  ಹಾಲಿನ ದರ ಏರಿಕೆ ಬೆನ್ನಲ್ಲೇ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮೊಸರು ದರವನ್ನೂ ಪರಿಷ್ಕರಿಸಿದೆ. ಅರ್ಧ ಲೀಟರ್ ಮೊಸರು ಬೆಲೆ 28 ರೂ.ನಿಂದ 34 ರೂ.ಗೆ ಹಾಗೂ 1 ಲೀಟರ್ ಮೊಸರು ಬೆಲೆ 54 ರೂ.ನಿಂದ 68 ರೂ.ಗೆ (ಲೀಟರ್‌ಗೆ 14 ರೂ. ಏರಿಕೆ) ಹೆಚ್ಚಳವಾಗಿದೆ.ನವೆಂಬರ್ 1ರಿಂದಲೇ (ನಾಳೆಯಿಂದ) ರಾಜ್ಯಾದ್ಯಂತ ಪರಿಷ್ಕೃತ ದರಗಳು ಅಧಿಕೃತವಾಗಿ ಜಾರಿಗೆ ಬರಲಿವೆ.

ಸಕಾಲದಲ್ಲಿ ಮಳೆಯಾಗದೆ ಮೇವು ಮತ್ತು ನೀರಿನ ಕೊರತೆ ಎದುರಾಗಿರುವುದರಿಂದ, ಪಶುಗಳ ನಿರ್ವಹಣೆ ಹಾಗೂ ಹೈನುಗಾರಿಕೆ ವೆಚ್ಚ ಹೆಚ್ಚಾಗಿದೆ. ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸಚಿವ ಸಂಪುಟದ ನಿರ್ಣಯದಂತೆ ಈ ದರ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ.

Scroll to Top