
(ನ್ಯೂಸ್ ಕಡಬ) newskadaba.com, ಅ.06 . ಭಾರತದ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ರಫ್ತು ಆದಾಯವು $600 ಮಿಲಿಯನ್ (ಸುಮಾರು ₹5,000 ಕೋಟಿಗೂ ಹೆಚ್ಚು) ಗಡಿ ದಾಟುವ ಹಾದಿಯಲ್ಲಿದೆ ಎಂದು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಈಗಾಗಲೇ ಫಿಲಿಪೈನ್ಸ್ಗೆ $330 ಮಿಲಿಯನ್ ಮೌಲ್ಯದ ಕ್ಷಿಪಣಿ ಪೂರೈಸಲಾಗಿದ್ದು, ವಿಯೆಟ್ನಾಂ ($100 ಮಿಲಿಯನ್) ಮತ್ತು ಇಂಡೋನೇಷ್ಯಾ ($200 ಮಿಲಿಯನ್) ಜೊತೆಗಿನ ಒಪ್ಪಂದಗಳು ಅಂತಿಮ ಹಂತದಲ್ಲಿವೆ.ಬ್ರಹ್ಮೋಸ್ನ ವಾಯುಪಡೆ ಆವೃತ್ತಿಯನ್ನು ಸುಖೋಯ್-30 MKI ಯುದ್ಧ ವಿಮಾನಗಳಲ್ಲಿ ಯಶಸ್ವಿಯಾಗಿ ಅಳವಡಿಸಲಾಗಿದ್ದು, ‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿಯೂ ಇದು ಗಮನ ಸೆಳೆದಿದೆ.
2025-26ನೇ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ರಕ್ಷಣಾ ರಫ್ತು ₹38,424 ಕೋಟಿಗೆ ತಲುಪಿದ್ದು, ಶೇ. 62.66 ರಷ್ಟು ಅಭೂತಪೂರ್ವ ಏರಿಕೆ ಕಂಡಿದೆ.ಸಾರ್ವಜನಿಕ ವಲಯದ ರಕ್ಷಣಾ ಸಂಸ್ಥೆಗಳ (DPSU) ಪಾಲು ₹21,071 ಕೋಟಿ (ಶೇ. 54.84) ಹಾಗೂ ಖಾಸಗಿ ವಲಯದ ಪಾಲು ₹17,353 ಕೋಟಿ (ಶೇ. 45.16) ಆಗಿದೆ.




