ಆಧಾರ್‌ನಲ್ಲಿ ಹೆಸರು ಬದಲಾಯಿಸುವುದು ಇನ್ಮುಂದೆ ಅಷ್ಟೊಂದು ಸುಲಭವಲ್ಲ: ಜಾರಿಯಾಯ್ತು ಹೊಸ ರೂಲ್ಸ್!

(ನ್ಯೂಸ್‌ ಕಡಬ) newskadaba.com, ಅ.06 . ಆಧಾರ್ ಕಾರ್ಡ್‌ನಲ್ಲಿ ಹೆಸರು ಪರಿಷ್ಕರಣೆ ಹಾಗೂ ತಿದ್ದುಪಡಿ ಮಾಡುವ ನಿಯಮಗಳಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ನೂತನ ಮಾರ್ಗಸೂಚಿಗಳು ಸೆಪ್ಟೆಂಬರ್ 18ರಿಂದಲೇ ಜಾರಿಗೆ ಬಂದಿವೆ.

ಸಣ್ಣ ತಿದ್ದುಪಡಿಗಳಿಗೆ ಇನಿಷಿಯಲ್ ಸೇರ್ಪಡೆ, ಸ್ಪೆಲ್ಲಿಂಗ್ ತಪ್ಪು ಅಥವಾ ಮನೆಹೆಸರು ತಿದ್ದುಪಡಿಗೆ ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ (PoI) ಅಗತ್ಯ.

ವಿವಾಹ/ವಿಚ್ಛೇದನದ ನಂತರ: ಮಾನ್ಯ ಗುರುತಿನ ಪುರಾವೆಯೊಂದಿಗೆ UIDAI ನಮೂನೆ Annexure-D ಅಫಿಡವಿಟ್ ಮತ್ತು ವಿವಾಹ ನೋಂದಣಿ ಪ್ರಮಾಣಪತ್ರ ಸಲ್ಲಿಸಬೇಕು.ಇಂಗ್ಲಿಷ್ ಹೆಸರು ಸರಿಯಿದ್ದು ಕನ್ನಡ ಮುದ್ರಣ ತಪ್ಪಿದ್ದರೆ, ಅಗತ್ಯ ಗುರುತಿನ ಪುರಾವೆ ಹಾಗೂ ನಿಗದಿತ ನಮೂನೆಯ ಅಫಿಡವಿಟ್ ನೀಡಬೇಕು.ಸರ್ಕಾರಿ ಗೆಜೆಟ್ ಅಧಿಸೂಚನೆ, ಹೊಸ ಹೆಸರಿನ ಗುರುತಿನ ಪುರಾವೆ ಹಾಗೂ ಪತ್ರಿಕಾ ಜಾಹೀರಾತಿನ ಪ್ರತಿ ಕಡ್ಡಾಯ.

ಜನಸಂಖ್ಯಾ ವಿವರಗಳ ತಿದ್ದುಪಡಿಗೆ ₹75 ಶುಲ್ಕ ಅನ್ವಯಿಸುತ್ತದೆ.ಹೆಸರು ತಿದ್ದುಪಡಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಬೇಕು.ಸಾಮಾನ್ಯ ನಿಯಮದಂತೆ ಜೀವನದಲ್ಲಿ ಗರಿಷ್ಠ 2 ಬಾರಿ ಮಾತ್ರ ಹೆಸರು ಬದಲಾಯಿಸಲು ಅವಕಾಶವಿದೆ.

Scroll to Top