
(ನ್ಯೂಸ್ ಕಡಬ) newskadaba.com, ಅ.06 .ಇಂಧನ ಹಾಗೂ ವಾಹನ ಬಿಡಿಭಾಗಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಿದ್ದು, ನೂತನ ದರಗಳು ನವೆಂಬರ್ 1ರಿಂದ ಜಾರಿಗೆ ಬರಲಿವೆ.
ಕನಿಷ್ಠ ದರ (ಮೊದಲ 1.5 ಕಿ.ಮೀ ಗೆ ₹40 (ಗರಿಷ್ಠ 3 ಪ್ರಯಾಣಿಕರಿಗೆ), ನಂತರದ ಪ್ರತಿ ಕಿ.ಮೀ.ಗೆ: ₹23 ಮತ್ತು ವೇಟಿಂಗ್ ಚಾರ್ಜ್: ಮೊದಲ 10 ನಿಮಿಷ ಉಚಿತ (ನಂತರದ ಪ್ರತಿ 15 ನಿಮಿಷಕ್ಕೆ ₹5) ಹಾಗೂ ರಾತ್ರಿ ದರ (ರಾತ್ರಿ 10 ರಿಂದ ಬೆಳಿಗ್ಗೆ 5): ಸಾಮಾನ್ಯ ದರದ 1.5 ಪಟ್ಟು.
ಪ್ರತಿಯೊಂದು ಆಟೋದಲ್ಲಿ ಪರಿಷ್ಕೃತ ದರ ಪಟ್ಟಿ ಪ್ರದರ್ಶಿಸುವುದು ಕಡ್ಡಾಯವಾಗಿದ್ದು, ಚಾಲಕರು ನಿಗದಿತ ಅವಧಿಯೊಳಗೆ ಡಿಜಿಟಲ್ ಮೀಟರ್‌ಗಳನ್ನು ರಿಕ್ಯಾಲಿಬ್ರೇಶನ್ ಹಾಗೂ ಸೀಲ್ ಮಾಡಿಸಬೇಕಿದೆ. ನಿಯಮ ಉಲ್ಲಂಘಿಸಿ ಹೆಚ್ಚುವರಿ ದರ ವಸೂಲಿ ಮಾಡಿದರೆ ಪರವಾನಗಿ ರದ್ದು ಸೇರಿದಂತೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.




