
(ನ್ಯೂಸ್ ಕಡಬ) newskadaba.com, ಸೆ.26 . ಮಂಗಳೂರು: ಕರಾವಳಿ ಭಾಗ ಹಾಗೂ ನೆರೆಯ ಕೇರಳದ ರೋಗಿಗಳ ಆಸರೆಯಾಗಿರುವ ಮಂಗಳೂರಿನ ಸರ್ಕಾರಿ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಸಾಮರ್ಥ್ಯ ಹೆಚ್ಚಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆಸ್ಪತ್ರೆಗೆ ಹಂತ ಹಂತವಾಗಿ ಒಟ್ಟು 400 ಹೆಚ್ಚುವರಿ ಹಾಸಿಗೆಗಳನ್ನು ಸೇರ್ಪಡೆಗೊಳಿಸಲು ಅನುಮೋದನೆ ನೀಡಲಾಗಿದ್ದು, ಮೊದಲ ಹಂತದಲ್ಲಿ 200 ಹಾಸಿಗೆಗಳ ವಿಸ್ತರಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಮೊದಲ ಹಂತದಲ್ಲಿ ಸೇರ್ಪಡೆಯಾಗಲಿರುವ 200 ಹಾಸಿಗೆಗಳಲ್ಲಿ 50 ಐಸಿಯು (30 ವೆಂಟಿಲೇಟರ್, 20 ಸ್ಟೆಪ್-ಡೌನ್), 10 ತುರ್ತು ಚಿಕಿತ್ಸೆ ಹಾಗೂ 140 ಸಾಮಾನ್ಯ ವಾರ್ಡ್ ಹಾಸಿಗೆಗಳು ಇರಲಿವೆ.ವಿಸ್ತರಣೆಗಾಗಿ 115 ಸ್ಟಾಫ್ ನರ್ಸ್‌ಗಳು ಸೇರಿದಂತೆ ಒಟ್ಟು 195 ವೈದ್ಯಕೀಯ ಮತ್ತು ಪೂರಕ ಸಿಬ್ಬಂದಿಯನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ.
ಪ್ರಸ್ತುತ 1,088 ಹಾಸಿಗೆಗಳಿದ್ದು, ಮುಂಬರುವ ದಿನಗಳಲ್ಲಿ ನೂತನ ಓಪಿಡಿ, ಸಿಸಿಬಿ ಬ್ಲಾಕ್ ಹಾಗೂ ಎಂಆರ್‌ಪಿಎಲ್ ಸಿಎಸ್‌ಆರ್ ಬ್ಲಾಕ್‌ಗಳ ನಿರ್ಮಾಣ ಪೂರ್ಣಗೊಂಡ ಬಳಿಕ ಒಟ್ಟು ಸಾಮರ್ಥ್ಯ 1,532ಕ್ಕೆ ತಲುಪಲಿದೆ.ಲಭ್ಯವಿರುವ ಅನುದಾನದಲ್ಲೇ ಕೆಟಿಪಿಪಿ ಕಾಯ್ದೆಯಂತೆ ಕಾಮಗಾರಿ ಪೂರ್ಣಗೊಳಿಸಬೇಕು, ಹೆಚ್ಚುವರಿ ಅನುದಾನ ಕೋರುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
.




