(ನ್ಯೂಸ್ ಕಡಬ) newskadaba.com ಸೆ. 02 ಭಾರತೀಯ ರೈಲ್ವೇಯ ಅಂಗಸಂಸ್ಥೆಯು ಭಾರತದಿಂದ ಜಪಾನ್ ಪ್ರವಾಸ ಕೈಗೊಳ್ಳಲು ಬಯಸುವ ಪ್ರವಾಸಿಗರಿಗಾಗಿ 8 ರಾತ್ರಿ ಮತ್ತು 9 ದಿನಗಳ ವಿಶೇಷ ವಿದೇಶಿ ಟೂರ್ ಪ್ಯಾಕೇಜ್ ಘೋಷಿಸಿದೆ.
ಪ್ರಾರಂಭ ದಿನಾಂಕ: ಅಕ್ಟೋಬರ್ 25, 2026 ರಿಂದ ನವೆಂಬರ್ 3, 2026 .ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್ನ ಟೋಕಿಯೋಗೆ ನೇರ ವಿಮಾನ ಪ್ರಯಾಣ.
ಟೋಕಿಯೋ (ಟೀಮ್ ಲ್ಯಾಬ್ ಪ್ಲಾನೆಟ್ಸ್, ಉಯೆನೋ ಪಾರ್ಕ್, ಸೆನ್ಸೋ ಜಿ ದೇವಸ್ಥಾನ, ಶಿಬುಯಾ ಕ್ರಾಸಿಂಗ್), ಮೌಂಟ್ ಫುಜಿ, ಹಕೋನ್ ರೋಪ್ವೇ, ನಾಗೋಯಾ, ಕ್ಯೋಟೋ, ನಾರಾ ಪಾರ್ಕ್, ಓಸಾಕಾ ಮತ್ತು ಹಿರೋಷಿಮಾ.
ಮುಂಬೈನಿಂದ ಜಪಾನ್ಗೆ ಹೋಗಿ ಬರಲು ವಿಮಾನ ಟಿಕೆಟ್. ಹೋಟೆಲ್ ವಸತಿ ಮತ್ತು ಭಾರತೀಯ ಶೈಲಿಯ ಆಹಾರ (ತಿಂಡಿ, ಊಟ).ಪ್ರವಾಸದ ಮಾರ್ಗದರ್ಶಿ ಹಾಗೂ ಪ್ರಮುಖ ಸ್ಥಳಗಳಿಗೆ ಪ್ರವೇಶ ಟಿಕೆಟ್ಗಳು.ಆಸಕ್ತ ಪ್ರವಾಸಿಗರು ಅಧಿಕೃತ IRCTC Tourism Portal ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು.








