ಮಂಗಳೂರು MRPL ಸ್ಫೋಟ ಪ್ರಕರಣ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಕಾರ್ಮಿಕ ನಿಧನ

(ನ್ಯೂಸ್‌ ಕಡಬ) newskadaba.com, ಅ. 17 .ಮಂಗಳೂರಿನ MRPL ತೈಲ ಶುದ್ಧೀಕರಣ ಘಟಕದಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಭೀಕರ ಸ್ಫೋಟ ಹಾಗೂ ಅಗ್ನಿ ದುರಂತ.17 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆ ಕಾರ್ಮಿಕ ರಾಜೇಶ್ ಡಿ’ಸಿಲ್ವಾ (ಸುರತ್ಕಲ್ ಇಡ್ಯಾ ಗ್ರಾಮ ಕಾನಾ ನಿವಾಸಿ) ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.

ಸೆಪ್ಟೆಂಬರ್ 30ರಂದು MRPL ನ 3ನೇ ಹಂತದ CHTU ಸ್ಥಾವರದಲ್ಲಿ ಈ ದುರಂತ ಸಂಭವಿಸಿದ್ದು, ಹಳೆಯಂಗಡಿಯ ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ರಾಜೇಶ್ ನಿಧನದೊಂದಿಗೆ ಈ ದುರಂತದಲ್ಲಿ ಬಲಿಯಾದವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.ಮೃತ ರಾಜೇಶ್ ಡಿ’ಸಿಲ್ವಾ ಅವರ ಕುಟುಂಬಕ್ಕೆ 1.20 ಕೋಟಿ ರೂ. ಪರಿಹಾರ ಹಾಗೂ ಆಸ್ಪತ್ರೆಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು MRPL ಸಂಸ್ಥೆ ಭರಿಸಿದೆ.

Scroll to Top