05 ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾತನ ದಸ್ತಗಿರಿ.



(ನ್ಯೂಸ್‌ ಕಡಬ) newskadaba.com ,ಆ.06: ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ: 65/2017 ಕಲಂ, 397, 395 ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ಆರೋಪಿತನಾಗಿ ಸುಮಾರು 5 ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ..







ಬೆಂಗಳೂರು ನಿವಾಸಿ ಮೂರ್ತಿ @ ಪಿಂಟು (37) ಎಂಬಾತನನ್ನು, ಧರ್ಮಸ್ಥಳ ಪೊಲೀಸ್ ಠಾಣಾ  ಸಿಬ್ಬಂದಿಗಳಾದ  ವ್ರಷಭ, ಚರಣ್ ರಾಜ್  ರವರು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ, ದಿನಾಂಕ 05/08/2026 ರಂದು ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ.






error: Content is protected !!
Scroll to Top