ಸ್ಕೂಟರ್ ಸ್ಟಂಟ್ ಮಾಡಿ ವೈರಲ್ ಆದ ಸವಾರನಿಗೆ ₹7,000 ದಂಡ; ಲೈಸೆನ್ಸ್ ರದ್ದತಿಗೆ ಪೊಲೀಸರ ಶಿಫಾರಸು!



(ನ್ಯೂಸ್ ಕಡಬ) newskadaba.com ಜು. 16: ಸ್ಕೂಟರ್ ಸ್ಟಂಟ್: ಸವಾರನಿಗೆ ₹7,000 ದಂಡ, ಲೈಸೆನ್ಸ್ ರದ್ದತಿಗೆ ಶಿಫಾರಸು ಕಳೆದ ಮಾರ್ಚ್ ತಿಂಗಳಿನಲ್ಲಿ ವಿದ್ಯಾರ್ಥಿಯೊಬ್ಬ ಸ್ಕೂಟರ್‌ನಲ್ಲಿ ಅಪಾಯಕಾರಿಯಾಗಿ ಸ್ಟಂಟ್ ಮಾಡಿದ್ದ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.







ವೈರಲ್ ವೀಡಿಯೋ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಮಂಗಳೂರು ನಗರ ಸಂಚಾರ ಪೊಲೀಸರು, ಆರೋಪಿ ಸವಾರನಿಗೆ ₹7,000 ದಂಡ ವಿಧಿಸಿದ್ದಾರೆ.ದಂಡದ ಜೊತೆಗೆ, ಆತನ ಚಾಲನಾ ಪರವಾನಿಗೆಯನ್ನು ರದ್ದುಗೊಳಿಸುವಂತೆ ಸಾರಿಗೆ ಪ್ರಾಧಿಕಾರಕ್ಕೆ (RTO) ಪೊಲೀಸರು ಶಿಫಾರಸು ಮಾಡಿದ್ದಾರೆ.






error: Content is protected !!
Scroll to Top