KGCE ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ನಕಲು: KSEB ತಾತ್ಕಾಲಿಕ ನೌಕರನ ಬಂಧನ, ಅಧ್ಯಾಪಕ ತಲೆಮರೆಸು!



(ನ್ಯೂಸ್ ಕಡಬ) newskadaba.com ಜು. 16: ಮಟ್ಟನ್ನೂರು ಪಾಲಿಟೆಕ್ನಿಕ್‌ನಲ್ಲಿ ನಡೆದ ಕೇರಳ ಸರ್ಕಾರಿ ಸರ್ಟಿಫಿಕೇಟ್ ಎಕ್ಸಾಮಿನೇಶನ್ (KGCE) ಪರೀಕ್ಷೆಯಲ್ಲಿ ಮೊಬೈಲ್ ಫೋನ್ ಬಳಸಿ ಅಕ್ರಮವಾಗಿ ಉತ್ತರ ಬರೆಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪೈವಳಿಕೆ ಕುರುಡಪದವು ಬಳಿಯ ಸಾದಂಗಯ ನಿವಾಸಿ, KSEB ವರ್ಕಾಡಿ ಸೆಕ್ಷನ್‌ನ ತಾತ್ಕಾಲಿಕ ನೌಕರ ಎಸ್. ಜನಾರ್ದನ ಎಂದು ಗುರುತಿಸಲಾಗಿದೆ.







ಕೂತುಪರಂಬ ಎಸಿಪಿ ಸಿಬಿ ಟೋಂ ನೇತೃತ್ವದ ಪೊಲೀಸ್ ತಂಡ ಈ ಭರ್ಜರಿ ಕಾರ್ಯಾಚರಣೆ ನಡೆಸಿದೆ.ಪ್ರಾಥಮಿಕ ತನಿಖೆಯ ಪ್ರಕಾರ, ಪರೀಕ್ಷಾ ಹಾಲ್‌ನಲ್ಲಿದ್ದ ಜನಾರ್ದನನಿಗೆ ಅಧ್ಯಾಪಕರೊಬ್ಬರು ಮೊಬೈಲ್ ಫೋನ್ ಮೂಲಕ ಉತ್ತರಗಳನ್ನು ಕಳುಹಿಸಿಕೊಡುತ್ತಿದ್ದರು ಎಂದು ತಿಳಿದುಬಂದಿದೆ. ವಿದ್ಯಾರ್ಥಿ ಜನಾರ್ದನ ಬಂಧನಕ್ಕೊಳಗಾಗುತ್ತಿದ್ದಂತೆ, ಆತನಿಗೆ ಸಹಕರಿಸಿದ್ದ ಅಧ್ಯಾಪಕ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.






ಈ ಪರೀಕ್ಷಾ ಕೇಂದ್ರದಲ್ಲಿ ಜನಾರ್ದನ ಮಾತ್ರವಲ್ಲದೆ ಇನ್ನು 21 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಿಗೂ ಇದೇ ರೀತಿ ಮೊಬೈಲ್ ಮೂಲಕ ಉತ್ತರಗಳನ್ನು ರವಾನಿಸಿ ನಕಲು ಮಾಡಲು ವ್ಯವಸ್ಥಿತವಾಗಿ ಸಹಕರಿಸಲಾಗಿತ್ತೇ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

error: Content is protected !!
Scroll to Top