ಪ್ರಿಯಕರನೊಂದಿಗೆ ಬಂದಿದ್ದ ವಿವಾಹಿತೆ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಕೌಟುಂಬಿಕ ಕಲಹ ಸುಖಾಂತ್ಯ!



(ನ್ಯೂಸ್ ಕಡಬ) newskadaba.com ಜು. 16: ಪತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಕಾರ್ಕಳಕ್ಕೆ ಬಂದಿದ್ದ ವಿವಾಹಿತೆಯೊಬ್ಬಳ ಹೈಡ್ರಾಮಾ, ಪೊಲೀಸರ ಸಮಾಲೋಚನೆಯ ನಂತರ ಸುಖಾಂತ್ಯ ಕಂಡಿದೆ.ಮಹಿಳೆ ನಾಪತ್ತೆಯಾಗಿರುವ ಕುರಿತು ಮಾಹಿತಿ ತಿಳಿದ ಪತಿ ಮತ್ತು ಕುಟುಂಬಸ್ಥರು ಕಾರ್ಕಳ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು.







ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ವಿವಾಹಿತೆ ಹಾಗೂ ಆಕೆಯ ಪ್ರಿಯಕರನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.ಠಾಣೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರಿಗೂ ಕೌನ್ಸಿಲಿಂಗ್ ನಡೆಸಿದ ಪೊಲೀಸರು, ಕುಟುಂಬದ ಜವಾಬ್ದಾರಿ ಮತ್ತು ಭವಿಷ್ಯದ ಕುರಿತು ಮಹಿಳೆಗೆ ಬುದ್ಧಿವಾದ ಹೇಳಿದ್ದಾರೆ.






ಅಂತಿಮವಾಗಿ ಕುಟುಂಬಸ್ಥರ ಮನವಿ ಹಾಗೂ ಪೊಲೀಸರ ಮಾರ್ಗದರ್ಶನದಿಂದ ತನ್ನ ತಪ್ಪನ್ನು ಅರಿತ ಮಹಿಳೆ, ಪ್ರಿಯಕರನನ್ನು ಬಿಟ್ಟು ಪತಿ ಮತ್ತು ಮಕ್ಕಳೊಂದಿಗೆ ಮರಳಿ ಸಂಸಾರ ನಡೆಸಲು ಒಪ್ಪಿಕೊಂಡಿದ್ದಾರೆ. ಈ ಮೂಲಕ ಗಂಭೀರ ಸ್ವರೂಪ ಪಡೆದುಕೊಳ್ಳಬೇಕಿದ್ದ ಪ್ರಕರಣವೊಂದು ಪೊಲೀಸ್ ಮಧ್ಯಸ್ಥಿಕೆಯಿಂದಾಗಿ ಶಾಂತಿಯುತವಾಗಿ ಬಗೆಹರಿದಿದೆ.

error: Content is protected !!
Scroll to Top