ಮಂಗಳೂರು: ಕೊನೆಗೂ ಕದ್ರಿ ವೃತ್ತದಿಂದ ಹುತಾತ್ಮರ ಸ್ಮಾರಕಕ್ಕೆ ಶಿಫ್ಟ್ ಆಯ್ತು ಟಿ-55 ಯುದ್ಧ ಟ್ಯಾಂಕ್!



(ನ್ಯೂಸ್ ಕಡಬ) newskadaba.com ಜು. 16: ಮಂಗಳೂರಿನ ಕದ್ರಿ ಸರ್ಕಿಟ್ ಹೌಸ್ ಬಳಿ ಇರಿಸಲಾಗಿದ್ದ ನಿವೃತ್ತ ಟಿ-55 ಯುದ್ಧ ಟ್ಯಾಂಕ್‌ ಅನ್ನು ಕೊನೆಗೂ ಕದ್ರಿಯ ಹುತಾತ್ಮರ ಸ್ಮಾರಕ ಬಳಿಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ.







ಭಾರತೀಯ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಈ ಟ್ಯಾಂಕ್ ಅನ್ನು ಪುಣೆಯ ಕಿರ್ಕೀ ಡಿಫೆನ್ಸ್ ಡಿಪೋದಲ್ಲಿ ಇರಿಸಲಾಗಿತ್ತು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮನವಿಯ ಮೇರೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇದನ್ನು ಮಂಗಳೂರಿನಲ್ಲಿ ಪ್ರದರ್ಶಿಸಲು ಅನುಮತಿ ನೀಡಿದ್ದರು.






ಕಳೆದ ವರ್ಷ ಮಂಗಳೂರಿಗೆ ತರಲಾಗಿದ್ದ ಈ ಟ್ಯಾಂಕ್ ಅನ್ನು ಬುಧವಾರ ಸಂಜೆ ಕ್ರೇನ್ ಬಳಸಿ ನೂತನ ವೇದಿಕೆಯ ಮೇಲೆ ವ್ಯವಸ್ಥಿತವಾಗಿ ಪ್ರತಿಷ್ಠಾಪಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ (ಮನಪಾ) ವತಿಯಿಂದ ಸುಮಾರು ₹38 ಲಕ್ಷ ವೆಚ್ಚದಲ್ಲಿ ಈ ಆಕರ್ಷಕ ವೇದಿಕೆಯನ್ನು ನಿರ್ಮಿಸಲಾಗಿದೆ.

ಸಾರ್ವಜನಿಕರ ವೀಕ್ಷಣೆ ಹಾಗೂ ಸ್ಫೂರ್ತಿಗಾಗಿ ಸಜ್ಜುಗೊಳಿಸಲಾಗುತ್ತಿರುವ ಈ ಯುದ್ಧ ಟ್ಯಾಂಕ್ ಅನ್ನು ಮುಂಬರುವ ಜುಲೈ 26ರ ಕಾರ್ಗಿಲ್ ವಿಜಯ್ ದಿವಸದಂದು ಅಧಿಕೃತವಾಗಿ ಅನಾವರಣಗೊಳಿಸಲು ನಿರ್ಧರಿಸಲಾಗಿದೆ.

error: Content is protected !!
Scroll to Top