ICC ನಿಯಮ ಬದಲಾವಣೆ: ಏಕದಿನ ವಿಶ್ವಕಪ್‌ನಲ್ಲಿ 3 ಬಾರಿ ಭಾರತ-ಪಾಕಿಸ್ತಾನ ಮುಖಾಮುಖಿ ಸಾಧ್ಯತೆ!

(ನ್ಯೂಸ್ ಕಡಬ) newskadaba.com ಜು. 16:ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 2027ರ ಪುರುಷರ ಏಕದಿನ ವಿಶ್ವಕಪ್ ಹಾಗೂ 2028ರ ಟಿ20 ವಿಶ್ವಕಪ್‌ಗಾಗಿ ಪರಿಷ್ಕೃತ ಸ್ವರೂಪಗಳನ್ನು ಪ್ರಕಟಿಸಿದೆ.

ಮುಖ್ಯ ಬದಲಾವಣೆಗಳು:
2027ರ ಏಕದಿನ ವಿಶ್ವಕಪ್ (ದಕ್ಷಿಣ ಆಫ್ರಿಕಾ):

ಒಟ್ಟು 14 ತಂಡಗಳು ಭಾಗವಹಿಸಲಿದ್ದು, ಕನಿಷ್ಠ ಶ್ರೇಯಾಂಕದ 3 ತಂಡಗಳು ಪ್ರಾಥಮಿಕ ಸುತ್ತನ್ನಾಡಿ 1 ತಂಡ ಮಾತ್ರ ಮುಖ್ಯ ಟೂರ್ನಿಗೆ ಅರ್ಹತೆ ಪಡೆಯಲಿದೆ.ಮುಖ್ಯ ಟೂರ್ನಿಯಲ್ಲಿ 12 ತಂಡಗಳನ್ನು ತಲಾ ಆರು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.ಹಳೆಯ ‘ಸೂಪರ್ ಸಿಕ್ಸ್’ ಬದಲಿಗೆ ಹೊಸ ಸೂಪರ್ ಸೆವೆನ್’ ಹಂತವನ್ನು ಪರಿಚಯಿಸಲಾಗಿದ್ದು, ಕ್ವಾರ್ಟರ್-ಫೈನಲ್ ಹಂತ ಇರುವುದಿಲ್ಲ.

ಇದರಿಂದಾಗಿ ಭಾರತ-ಪಾಕಿಸ್ತಾನ ತಂಡಗಳು ಆರಂಭಿಕ ಗುಂಪು ಹಂತ, ಸೂಪರ್ ಸೆವೆನ್ ಹಾಗೂ ಸೆಮಿಫೈನಲ್/ಫೈನಲ್ ಸೇರಿದಂತೆ ಒಟ್ಟು 3 ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ.

2028ರ ಟಿ20 ವಿಶ್ವಕಪ್:

20 ತಂಡಗಳ ಸ್ವರೂಪವೇ ಮುಂದುವರಿಯಲಿದ್ದು, ಗುಂಪು ಹಂತದಿಂದ 8ರ ಬದಲಿಗೆ 10 ತಂಡಗಳು ಸೂಪರ್ 10 ಹಂತಕ್ಕೆ ಅರ್ಹತೆ ಪಡೆಯಲಿವೆ.ಸೂಪರ್ 10 ಹಂತದ ಅಗ್ರ ಎರಡು ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದ್ದು, ಉಳಿದ ಸ್ಥಾನಗಳಿಗಾಗಿ ಹೊಸದಾಗಿ ಎಲಿಮಿನೇಟರ್’ ಹಂತವನ್ನು ಅಳವಡಿಸಲಾಗಿದೆ.

Scroll to Top