(ನ್ಯೂಸ್ ಕಡಬ) newskadaba.com, ಜು.16: ಅಂತರರಾಷ್ಟ್ರೀಯ ಮಾದಕ ದ್ರವ್ಯ ನಿಷೇಧ ದಿನದ ಅಂಗವಾಗಿ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ವಿಶೇಷ ಆರೋಗ್ಯ ಶಿಬಿರ ಆಯೋಜನೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾಸ್ಪತ್ರೆ. ಒಟ್ಟು 145 ಖೈದಿಗಳಿಗೆ ಟಿಬಿ, ಎಕ್ಸ-ರೇ, ICTC, ಹೆಪಟೈಟಿಸ್-ಬಿ ಮತ್ತು ಸಿ, ರಕ್ತದೊತ್ತಡ, ಮಧುಮೇಹ, ಸಿಫಿಲಿಸ್ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಯಿತು.
ನಡೆಸಲಾದ ಮಾದಕ ದ್ರವ್ಯ ಪತ್ತೆ ಹಚ್ಚುವ ಪರೀಕ್ಷೆಯಲ್ಲಿ ಎಲ್ಲಾ 145 ಖೈದಿಗಳ ವರದಿ ನೆಗೆಟಿವ್ ಬಂದಿದ್ದು, ವೈದ್ಯರ ತಂಡ ಸಂತಸ ವ್ಯಕ್ತಪಡಿಸಿದೆ. ಇದೇ ವೇಳೆ ಜಿಲ್ಲಾ ಕಾರಾಗೃಹವನ್ನು ‘ತಂಬಾಕು ಮುಕ್ತ ಕಾರಾಗೃಹ’ ಎಂದು ಘೋಷಿಸಲು ಮನವಿ ಮಾಡಲಾಯಿತು.ಜಿಲ್ಲಾ ಆರೋಗ್ಯ ಇಲಾಖೆಯ ಡಾ. ವಿಶ್ವಾಸ್ ಶೆಟ್ಟಿ, ಕೋಟ ಸಮುದಾಯ ಆರೋಗ್ಯ ಕೇಂದ್ರದ ಡಾ. ಪ್ರಭು ಮತ್ತು ತಂಡದವರಿಂದ ತಪಾಸಣೆ.
ಕಾರಾಗೃಹದ ಅಧಿಕಾರಿಗಳಾದ ಡಿ.ಆರ್. ಕೊಣಿ, ಎಸ್.ಎ. ಶಿರೋಳ, ಆರ್.ಎಸ್. ಲಮಾಣ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.









