ಬಟ್ಟೆ ಅಂಗಡಿಯ ಗ್ರಿಲ್‌ನಿಂದ ಆಯತಪ್ಪಿ ಬಿದ್ದ 4 ವರ್ಷದ ಮಗು: ಸ್ಥಿತಿ ಗಂಭೀರ

(ನ್ಯೂಸ್‌ ಕಡಬ) newskadaba.com,   ಜು.14 : ಚಿಕ್ಕಬಳ್ಳಾಪುರ ನಗರದ ಪಿಳ್ಳಪ್ಪ ಕಾಂಪ್ಲೆಕ್ಸ್‌ನಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕಿ ಗ್ರಿಲ್‌ನಿಂದ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ನಾರಾಯಣಸ್ವಾಮಿ-ಮಧು ದಂಪತಿಯ ಪುತ್ರಿ ..

ಪೋಷಕರು ಬಟ್ಟೆ ಖರೀದಿಯಲ್ಲಿ ನಿರತರಾಗಿದ್ದಾಗ, ಮಗು ಅಂಗಡಿಯ ಗ್ರಿಲ್ ಹತ್ತಿ ಆಟವಾಡುತ್ತಿತ್ತು. ತಾಯಿ ಮಗುವನ್ನು ಗ್ರಿಲ್‌ನಿಂದ ಎರಡು ಬಾರಿ ಪಕ್ಕಕ್ಕೆ ಕರೆತಂದಿದ್ದರೂ, ಬಾಲಕಿ ಮತ್ತೆ ಅಲ್ಲಿಗೆ ಹೋಗಿ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾಳೆ.

ಗಾಯಗೊಂಡ ಮಗುವಿಗೆ ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Scroll to Top