(ನ್ಯೂಸ್ ಕಡಬ) newskadaba.com, ಸೆ .08 . ಇತ್ತೀಚಿಗೆ ಅಯೋಧ್ಯೆ ರಾಮಮಂದಿರದ ಹೊಸ ಸಿಇಓ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರು ನೇಮಕಗೊಂಡಿದ್ದಾರೆ. ಅದರ ಬೆನ್ನಲ್ಲೇ ಮಂದಿರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ತರಲಾಗಿದೆ.
ಶ್ರೀ ರಾಮಮಂದಿರದ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಹೊಸ ನಿಯಮಗಳ ಮೂಲಕ ಅಕ್ರಮ ತಪ್ಪಿಸಲು ಟ್ರಸ್ಟ್ ನಿರ್ಧರಿಸಿದೆ. ದೇಣಿಗೆ ಎಣಿಕೆ ಮಾಡುವ ಜೇಬಿಲ್ಲದ ಸಮವಸ್ತ್ರ ಕಡ್ಡಾಯವಾಗಿದ್ದು, ಎಣಿಕಾ ಕೇಂದ್ರದ ಪ್ರವೇಶ ಹಾಗೂ ನಿರ್ಗಮನ ವೇಳೆ ತಪಾಸಣೆ ಕಡ್ಡಾಯಗೊಳಿಸಿದ್ದಾರೆ. ಜೊತೆಗೆ ದೇಣಿಗೆ ಎಣಿಕೆಯ ಇಡೀ ಪ್ರಕ್ರಿಯೆಯ ವಿಡಿಯೋವನ್ನು ರೆಕಾರ್ಡ್ ಮಾಡಲಿದ್ದಾರೆ.

ಈ ಮೊದಲು ಸಿಸಿಟಿವಿ ದೃಶ್ಯಗಳನ್ನು 45 ದಿನಗಳ ಬ್ಯಾಕಪ್ ಇಡಲಾಗುತ್ತಿತು. ಇದೀಗ ಅದನ್ನು 180 ದಿನಗಳ ಕಾಲ ಸಂರಕ್ಷಿಸಲು ನಿರ್ಧಾರ ಮಾಡಲಾಗಿದೆ. ಸಾಮಾನ್ಯ ಕ್ಯಾಮೆರಾಗಳ ಬದಲಿಗೆ PTZ ಕ್ಯಾಮೆರಾ ಅಳವಡಿಕೆಗೆ ನಿರ್ಧರಿಸಿದ್ದಾರೆ. ಇವು ಸ್ವಯಂ ತಿರುಗುವಿಕೆ ಮತ್ತು Zooming System ಹೊಂದಿವೆ. ಎಣಿಕಾ ಕೇಂದ್ರ ಮೇಲ್ವಿಚಾರಣೆ ಮಾಡಲು 13 ಕ್ಯಾಮೆರಾಗಳ ಬದಲಿಗೆ 27 ಕ್ಯಾಮೆರಾ ಅಳವಡಿಕೆ ನಿರ್ಧಿರಿಸಲಾಗಿದೆ. ಜೊತೆಗೆ ಹೆಚ್ಚುವರಿಯಾಗಿ ಎಸ್ಐಎಸ್ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಿದ್ದಾರೆ.




