ವಯನಾಡು ಭೂಕುಸಿತ: ಮೂವರ ಮೃತ್ಯು ಇಂಜಿನಿಯರ್ ಸೇರಿ ಐವರು ನಾಪತ್ತೆ – ಬಿರುಸಿನ ಶೋಧ ಕಾರ್ಯ

(ನ್ಯೂಸ್ ಕಡಬ) newskadaba.com, ಜು.09: ಕೇರಳದ ಮೆಪ್ಪಾಡಿಯ ಕಲ್ಲಾಡಿ ಬಳಿ ಸುರಂಗ ರಸ್ತೆ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ಭೀಕರ ಗುಡ್ಡಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ ಎಂದು ಕೇರಳದ ಜಿಲ್ಲಾಧಿಕಾರಿ (ಡಿಸಿ) ಮೇಘಶ್ರೀ ತಿಳಿಸಿದ್ದಾರೆ.
ಮಧ್ಯಪ್ರದೇಶದ ಜೆಸಿಬಿ ಆಪರೇಟರ್ ಚಂದ್ರಬಾನ್, ಬಿಹಾರದ ಬಿಕಾಶ್ ಕುಮಾರ್ ಮತ್ತು ಜಾರ್ಖಂಡ್‌ನ ಕಾರ್ಮಿಕ ಅನ್ಮೋಲ್ ಎಂದು ಗುರುತಿಸಲಾಗಿದೆ.ವಿವಿಧ ರಾಜ್ಯಗಳ ಮೂಲದ ಇಂಜಿನಿಯರ್ ಹಾಗೂ ಸರ್ವೇಯರ್ ಸೇರಿದಂತೆ ಒಟ್ಟು ಐವರು ನಾಪತ್ತೆಯಾಗಿದ್ದಾರೆ.ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನ 200ಕ್ಕೂ ಹೆಚ್ಚು ಸಿಬ್ಬಂದಿ ಬಿರುಸಿನ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ನಿರಂತರ ಮಳೆಯು ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದೆ.
ಕಲ್ಲಾಡಿ ಸುತ್ತಮುತ್ತ ಮತ್ತೆ ಭೂಕುಸಿತದ ಆತಂಕ ಎದುರಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ 23 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ಈ ದುರಂತಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Scroll to Top