(ನ್ಯೂಸ್ ಕಡಬ) newskadaba.com, ಜೂ.26 :ಫ್ರೆಂಚ್ ಆಟೋಮೊಬೈಲ್ ಸಂಸ್ಥೆ ರೆನಾಲ್ಟ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸಬ್-ಕಾಂಪ್ಯಾಕ್ಟ್ ಎಸ್ಯುವಿ ‘ಕೈಗರ್’ ಅನ್ನು ಹೊಸ ಅಪ್ಡೇಟ್ಗಳೊಂದಿಗೆ ಬಿಡುಗಡೆ ಮಾಡಿದೆ. ಟರ್ಬೊ ಪೆಟ್ರೋಲ್ ಪ್ರಿಯರಿಗಾಗಿ ಕಂಪನಿ ಕೈಗೆಟುಕುವ ಬೆಲೆಯಲ್ಲಿ ಹೊಸ ವೇರಿಯೆಂಟ್ಗಳನ್ನು ಪರಿಚಯಿಸಿದೆ.
- ಎವಲ್ಯೂಷನ್ ಟರ್ಬೊ (ಹೊಸದು): ₹7.89 ಲಕ್ಷ. (ಹಳೆಯ ಆರಂಭಿಕ ಬೆಲೆ ₹9.33 ಲಕ್ಷಕ್ಕೆ ಹೋಲಿಸಿದರೆ ₹1.46 ಲಕ್ಷ ಉಳಿತಾಯ)
- ಎವಲ್ಯೂಷನ್ ಪ್ಲಸ್ (0L ನ್ಯಾಚುರಲಿ ಆಸ್ಪಿರೇಟೆಡ್): ₹6.99 ಲಕ್ಷ.
- ಟೆಕ್ನೋ ಟರ್ಬೊ ಮ್ಯಾನುವಲ್: ₹8.45 ಲಕ್ಷ. (ಇದು ಸಿವಿಟಿ ಆಟೋಮ್ಯಾಟಿಕ್ ಮಾದರಿಗಿಂತ ಸುಮಾರು ₹90,000 ಅಗ್ಗವಾಗಿದೆ)
ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಡಿಆರ್ಎಲ್, ಎಲ್ಇಡಿ ಟೈಲ್ಲ್ಯಾಂಪ್ಸ್ ಮತ್ತು 16-ಇಂಚಿನ ಫ್ಲೆಕ್ಸ್ ವೀಲ್ಸ್.ವೈರ್ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುವ 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್.ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಆಟೋಮ್ಯಾಟಿಕ್ ಎಸಿ, ಅಡ್ಜಸ್ಟಬಲ್ ORVM ಮತ್ತು ಹೈಟ್-ಅಡ್ಜಸ್ಟಬಲ್ ಡ್ರೈವರ್ ಸೀಟ್.ಅತ್ಯುತ್ತಮ ‘ಟಾರ್ಕ್-ಟು-ವೇಟ್’ ಅನುಪಾತ ಹೊಂದಿದ್ದು, ಕೆಲವೇ ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗ ತಲುಪುತ್ತದೆ.













