(ನ್ಯೂಸ್ ಕಡಬ) newskadaba.com, ಜೂ.25 :ಕಲಿಯುಗ ಕಾಮಧೇನು ಎಂದೇ ಪ್ರಸಿದ್ಧವಾಗಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಜೂನ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಕಳೆದ 21 ದಿನಗಳಲ್ಲಿ ಒಟ್ಟು 3.72 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ನೋಟುಗಳು: ₹3,61,40,030
ನಾಣ್ಯಗಳು: ₹11,02,500
ಚಿನ್ನ: 67 ಗ್ರಾಂ
ಬೆಳ್ಳಿ: 511 ಗ್ರಾಂ
ಮಠದ ಅಧಿಕಾರಿಗಳು, ಮುಜರಾಯಿ ಇಲಾಖೆಯ ಅಧಿಕಾರಿಗಳು, ನೂರಾರು ಸಿಬ್ಬಂದಿ ಹಾಗೂ ಕರಸೇವಕರ ಸಮ್ಮುಖದಲ್ಲಿ ಈ ಹುಂಡಿ ಎಣಿಕೆ ಕಾರ್ಯ ಯಶಸ್ವಿಯಾಗಿ ಜರುಗಿದೆ. ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿ ದಾಖಲೆ ಪ್ರಮಾಣದ ಕಾಣಿಕೆ ಹರಿದುಬಂದಿದೆ.







