(ನ್ಯೂಸ್ ಕಡಬ) newskadaba.com, ಆ.21: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಆಹಾರ ಪೂರೈಸುವ ಅಡುಗೆ ಸೇವಾ ಘಟಕಕ್ಕೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಯಾಣಿಕರಿಗೆ ನೀಡಲಾಗುವ ಆಹಾರದ ಗುಣಮಟ್ಟ, ನೈರ್ಮಲ್ಯ, ಆಹಾರ ತಯಾರಿಕೆ, ಸಾಗಣೆ ವಾಹನಗಳ ಶುಚಿತ್ವ ಮತ್ತು ಸುರಕ್ಷತಾ ಶಿಷ್ಟಾಚಾರಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದರು.ಆಹಾರ ಸುರಕ್ಷತಾ ಉಲ್ಲಂಘನೆಗಳ ಬಗ್ಗೆ ಸಾರ್ವಜನಿಕರು ದೂರು ನೀಡಲು ರಾಜ್ಯ ಸರ್ಕಾರ ‘QR ಕೋಡ್’ ವ್ಯವಸ್ಥೆ ಜಾರಿಗೆ ತಂದ ಬೆನ್ನಲ್ಲೇ ಈ ಪರಿಶೀಲನೆ ನಡೆದಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದಂತೆ ಹಾಸ್ಟೆಲ್, ಪಿಜಿ, ಹೋಟೆಲ್, ರೈಲ್ವೆ ಕ್ಯಾಂಟೀನ್ ಹಾಗೂ ವಿಮಾನ ಸಂಸ್ಥೆಗಳ ಆಹಾರ ಸುರಕ್ಷತೆಗೆ ರಾಜ್ಯಾದ್ಯಂತ ವಿಶೇಷ ತಪಾಸಣಾ ಅಭಿಯಾನ ವಿಸ್ತರಿಸಲಾಗಿದೆ.








