ಅಭಷೇಕ್ ಬ್ಯಾನರ್ಜಿ ನಿವಾಸದ ಮೇಲೆ 4 ಗಂಟೆಗಳ ಕಾಲ ಜಂಟಿ ಕಾರ್ಯಾಚರಣೆ; ಮಮತಾ ಭೇಟಿ



(ನ್ಯೂಸ್‌ ಕಡಬ) newskadaba.com,  ಜೂ.13 : ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ಕೋಲ್ಕತ್ತಾ ಮತ್ತು ಪಶ್ಚಿಮ ಮೇದಿನಿಪುರ ಪೊಲೀಸರು ಕೇಂದ್ರ ಪಡೆಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.







ಮುಂಜಾನೆ 3 ಗಂಟೆಗೆ ಆರಂಭವಾದ ಈ ಶೋಧ ಕಾರ್ಯವು ಸತತ 4 ಗಂಟೆಗಳಿಗೂ ಹೆಚ್ಚು ಕಾಲ ನಡೆದಿದೆ. ಮನೆಯ ಬಾಗಿಲು ತಟ್ಟಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಪೊಲೀಸರು ಬೀಗ ಒಡೆದು ಒಳಪ್ರವೇಶಿಸಿದ್ದಾರೆ.






ಪೊಲೀಸರು ಬಲವಂತವಾಗಿ ಮನೆಗೆ ನುಗ್ಗಿ ಇಡೀ ಆವರಣವನ್ನು ಜಾಲಾಡಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.ದಾಳಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ.

error: Content is protected !!
Scroll to Top