ಕುಸಿತದಿಂದ ಚೇತರಿಕೆಯತ್ತ ರೂಪಾಯಿ ಮುಖ: ಷೇರು ಮಾರುಕಟ್ಟೆಯಲ್ಲಿ ಧನಾತ್ಮಕ ವಾತಾವರಣ



(ನ್ಯೂಸ್ಕಡಬ) newskadaba.com,   ಜೂ. 12  ಮೇ ತಿಂಗಳ ಮೂರನೇ ವಾರದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 96.57 ಮಟ್ಟಕ್ಕೆ ಕುಸಿದಿತ್ತು. ಆದರೆ ಅಲ್ಲಿಂದೀಚೆಗೆ ಭಾರತೀಯ ಕರೆನ್ಸಿ ಸುಮಾರು 1.39 ರೂಪಾಯಿಗಳಷ್ಟು ಚೇತರಿಕೆ ಕಂಡಿದೆ. ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆ ಶಾಂತಿ ಒಪ್ಪಂದ ಸಾಧ್ಯತೆಯ ಬಗ್ಗೆ ನೀಡಿದ ಸೂಚನೆಯ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ.







ಭಾರತ ತನ್ನ ತೈಲ ಅಗತ್ಯದ ಬಹುಪಾಲನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ತೈಲದ ಬೆಲೆ ಇಳಿದಾಗ ಡಾಲರ್‌ನಲ್ಲಿ ಪಾವತಿಸಬೇಕಾದ ಮೊತ್ತವೂ ಕಡಿಮೆಯಾಗುತ್ತದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದಾಗಿ ಗುರುವಾರ ರೂಪಾಯಿ ಮೌಲ್ಯ 60 ಪೈಸೆ ಕುಸಿದು 95.85 ರೂ.ನಲ್ಲಿ ವಹಿವಾಟು ಮುಗಿಸಿತ್ತು..






ಇರಾನ್ ಮತ್ತು ಅಮೆರಿಕ ನಡುವಿನ ಒಪ್ಪಂದದ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಹೀಗಾಗಿ ಜಾಗತಿಕ ಹೂಡಿಕೆದಾರರು ಎಚ್ಚರಿಕೆಯ ನಿಲುವು ಮುಂದುವರಿಸಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಬೆಳವಣಿಗೆಗಳು ರೂಪಾಯಿ ಚಲನವಲನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

error: Content is protected !!
Scroll to Top