ರೇಡಿಯೋ ಪ್ರಸ್ತುತತೆಗೆ ‘ಸ್ಥಳೀಯ ಕೇಂದ್ರಿತ’ ವಿಧಾನದ ಅಗತ್ಯವಿದೆ: ಅಶ್ವಿನಿ ವೈಷ್ಣವ್ ಪ್ರತಿಪಾದನೆ

(ನ್ಯೂಸ್‌ ಕಡಬ) newskadaba.com,ಜೂ.12: ತ್ವರಿತ ತಾಂತ್ರಿಕ ಪ್ರಗತಿಯ ಯುಗದಲ್ಲಿ ರೇಡಿಯೋ ಪ್ರಸಾರವು ತನ್ನ ಪ್ರಸ್ತುತತೆ ಮತ್ತು ಪರಿಣಾಮಕಾರಿತನವನ್ನು ಕಾಯ್ದುಕೊಳ್ಳಲು ‘ಡಿಜಿಟಲ್ ಫಸ್ಟ್’ (ಡಿಜಿಟಲ್‌ಗೆ ಮೊದಲ ಆದ್ಯತೆ) ಹಾಗೂ ‘ಹೈಪರ್-ಲೋಕಲ್’ (ಸ್ಥಳೀಯ ಕೇಂದ್ರಿತ) ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಜೈಸಲ್ಮೇರ್‌ನ ರಾಮಗಢದಲ್ಲಿ 20 ಕಿಲೋವ್ಯಾಟ್ ಆಕಾಶವಾಣಿ ಎಫ್‌ಎಂ ಟ್ರಾನ್ಸ್‌ಮಿಟರ್ ಉದ್ಘಾಟಿಸಿ ಮಾತನಾಡಿದ ಅವರು, ರೇಡಿಯೋ ಮಾಧ್ಯಮವು ಇನ್ನಷ್ಟು ಬಲಗೊಳ್ಳಲು ಸ್ಥಳೀಯ ಕಲಾವಿದರು ಮತ್ತು ಕುಶಲಕರ್ಮಿಗಳನ್ನು ತನ್ನೊಂದಿಗೆ ಸಕ್ರಿಯವಾಗಿ ಸಂಯೋಜಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

Scroll to Top