ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರ ರಚನೆ



(ನ್ಯೂಸ್ ಕಡಬ) newskadaba.com ಕಡಬ, ಜೂ. 08. ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಪ್ರಸಕ್ತ ವಿದ್ಯಾರ್ಥಿ ಸರಕಾರದ ಚುನಾವಣಾ ಪ್ರಕ್ರಿಯೆಯು ಜೂನ್ 6ರ ಶನಿವಾರದಂದು ನಡೆಯಿತು.







ನಾಯಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳ ಪೈಕಿ, ದಿಗಂತ್ 10ನೇ ತರಗತಿ ಬಹುಮತಗಳನ್ನು ಪಡೆದು ನಾಯಕ ಸ್ಥಾನಕ್ಕೆ ಆಯ್ಕೆಗೊಂಡರು. ಉಪನಾಯಕ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿ, ಹೆಚ್ಚು ಮತಗಳಿಂದ ಲಿಖಿತ್ ಕುಂಬಾರ 9ನೇ ತರಗತಿ ಉಪನಾಯಕ ಸ್ಥಾನಕ್ಕೆ ಆಯ್ಕೆಯಾದರು. ವಿದ್ಯುನ್ಮಾನ ಮತಯಂತ್ರದ ಮೂಲಕ ಮತದಾನ ನಡೆಸಲಾಯಿತು.






 

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶೈಲಶ್ರೀ ಎಸ್ ರೈ, ಚುನಾವಣಾಧಿಕಾರಿಗಳಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಲಕ್ಷ್ಮೀಶ ಗೌಡ ಆರಿಗ, ಶ್ರೀಮತಿ ಸೌಮ್ಯ ಕೆ.ಎ ಉಪಸ್ಥಿತರಿದ್ದು ಮಾಹಿತಿಗಳನ್ನು ನೀಡಿದರು. ಶಿಕ್ಷಕ-ಶಿಕ್ಷಕೇತರ ವೃಂದವರು ಸಹಕರಿಸಿದರು.

error: Content is protected !!
Scroll to Top