ಮಂಗಳೂರು : ಕೇರಳದ ಲಾಟರಿ ಖರೀದಿಸಿದ ವ್ಯಕ್ತಿಗೆ ವಂಚನೆ – ಪ್ರಕರಣ ದಾಖಲು



(ನ್ಯೂಸ್‌ ಕಡಬ) newskadaba.com,  ಜೂ.06 ಮಂಗಳೂರು: ಫೇಸ್‌ಬುಕ್‌ನಲ್ಲಿ ಬಂದ ಕೇರಳ ಲಾಟರಿಯ ನಕಲಿ ಜಾಹೀರಾತು ನಂಬಿ ಸುರತ್ಕಲ್ ನಿವಾಸಿಯೊಬ್ಬರು ₹1.85 ಲಕ್ಷ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







ಮೇ 29ರಂದು ಫೇಸ್‌ಬುಕ್‌ನಲ್ಲಿ ₹50 ರ ಲಾಟರಿ ಜಾಹೀರಾತು ನೋಡಿ ಸಂತ್ರಸ್ತರು ₹100 ಪಾವತಿಸಿ ಆನ್‌ಲೈನ್‌ನಲ್ಲಿ 2 ಟಿಕೆಟ್ ಖರೀದಿಸಿದ್ದರು. ಅಂದೇ ಸಂಜೆ ಕರೆ ಮಾಡಿದ ಅಪರಿಚಿತರು, “ನಿಮಗೆ ₹12 ಲಕ್ಷ ಬಹುಮಾನ ಬಂದಿದೆ” ಎಂದು ನಂಬಿಸಿದ್ದರು. ಬಳಿಕ ಬಹುಮಾನದ ಹಣ ಬಿಡುಗಡೆ ಮಾಡಲು ಪ್ರಕ್ರಿಯೆ ಶುಲ್ಕ ಹಾಗೂ ತೆರಿಗೆಯ ಹೆಸರಿನಲ್ಲಿ ವಿವಿಧ ಗೂಗಲ್ ಪೇ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹1,85,636 ವರ್ಗಾಯಿಸಿಕೊಂಡು ವಂಚಿಸಿದ್ದರು.






ಅನುಮಾನಗೊಂಡು ಜೂನ್ 2ರಂದು ಸಂತ್ರಸ್ತರು ಕೇರಳದ ತಿರುವನಂತಪುರದಲ್ಲಿದ್ದ ಲಾಟರಿ ಕಚೇರಿಗೆ ನೇರವಾಗಿ ಭೇಟಿ ನೀಡಿ ವಿಚಾರಿಸಿದಾಗ ಇದೊಂದು ನಕಲಿ ಲಾಟರಿ ದಂಧೆ ಎಂಬುದು ಬಯಲಾಗಿದೆ.

error: Content is protected !!
Scroll to Top