(ನ್ಯೂಸ್ ಕಡಬ) newskadaba.com, ಜೂ.06 ನವದೆಹಲಿ:ಭಾರತದ 20 ವರ್ಷದ ಯುವ ಗ್ರಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಪ್ರತಿಷ್ಠಿತ ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಟೂರ್ನಿಯ ಮಧ್ಯಭಾಗದಲ್ಲಿ ಸತತ ಸೋಲು ಕಂಡು ಕೊನೆಯ ಸ್ಥಾನಕ್ಕೆ ಕುಸಿದಿದ್ದ ಪ್ರಜ್ಞಾನಂದ, ನಂತರ ಅದ್ಭುತವಾಗಿ ಪುಟಿದೆದ್ದು ಸತತ 4 ಪಂದ್ಯಗಳನ್ನು ಗೆದ್ದರು.ಕೊನೆಯ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಕಡ್ಡಾಯವಾಗಿ ಗೆಲ್ಲಬೇಕಾದ ಒತ್ತಡದಲ್ಲೂ ಭರ್ಜರಿ ಜಯ ಸಾಧಿಸಿ, ಒಟ್ಟು 18 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರು.
ಕಾರ್ಲ್‌ಸನ್‌ಗೆ ‘ಡಬಲ್ ಶಾಕ್’: ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಒಂದೇ ಟೂರ್ನಿಯಲ್ಲಿ ಬಿಳಿ ಮತ್ತು ಕಪ್ಪು ಕಾಯಿಗಳೆರಡರಲ್ಲೂ (ಕ್ಲಾಸಿಕಲ್ ಡಬಲ್) ಸೋಲಿಸಿ ಪ್ರಜ್ಞಾನಂದ ಅಬ್ಬರಿಸಿದರು.









