(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 03. ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ (ಸ್ವಾಯತ್ತತೆ), ಮಂಗಳೂರು ಇಲ್ಲಿ 2026-27ನೇ ಸಾಲಿನಲ್ಲಿ 2 ವರ್ಷಗಳ ಐಟಿಐ/ದ್ವಿತೀಯ ಪಿ.ಯು.ಸಿ(ವಿಜ್ಞಾನ)/ದ್ವಿತೀಯ ಪಿ.ಯು.ಸಿ (ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾಂತರ 2ನೇ ವರ್ಷ / 3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್ಗಳ ಪ್ರವೇಶಾತಿಗೆ ಹಾಗೂ ಒಂದು ವರ್ಷದ ತಾಂತ್ರಿಕ ಕೆಲಸದ ಅನುಭವ ಹೊಂದಿದ್ದು, ಖಾಯಂ ಸೇವೆಯಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಸಕ್ತ ಅಭ್ಯರ್ಥಿಗಳಿಗೆ ವರ್ಕಿಂಗ್ ಪ್ರೊಫೆಶನಲ್ಸ್ ಡಿಪ್ಲೊಮಾ ಕೋರ್ಸ್ಗಳಿಗೆ ಆಫ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜೂನ್ 6 ರವರೆಗೆ ಅವಧಿ ವಿಸ್ತರಿಸಲಾಗಿದೆ. ಅಭ್ಯರ್ಥಿಗಳ ಮೆರಿಟ್ಗನುಗುಣವಾಗಿ ಆಫ್ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಸೂಕ್ತ ಮೂಲ ದಾಖಲೆಗಳೊಂದಿಗೆ ಜೂನ್ 6 ರೊಳಗೆ ಮಧ್ಯಾಹ್ನ 12 ಗಂಟೆಯ ಒಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಅಧಿಕೃತ ವೆಬ್ಸೈಟ್ http://gpt.karnatataka.gov.in/kptmangalor/public/en ಅಥವಾ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್(ಸ್ವಾಯತ್ತತೆ) ಮಂಗಳೂರು ಕಛೇರಿಯ ದೂರವಾಣಿ ಸಂಖ್ಯೆ: 0824-2211636, 3516910 ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆ.ಪಿ.ಟಿ ಡಿಪ್ಲೋಮಾ ಕೋರ್ಸ್: ಅವಧಿ ವಿಸ್ತರಣೆ









