ಹೋಟೆಲ್ ಗಳಿಗೆ ಸದ್ಯಕ್ಕೆ ಗ್ಯಾಸ್ ಇಲ್ಲ, ಎಲೆಕ್ಟ್ರಿಕ್ ಸ್ಟೌವ್ ಬಳಸಿ – ಸಚಿವ ಮುನಿಯಪ್ಪ



(ನ್ಯೂಸ್‌ ಕಡಬ) newskadaba.com ಮಾ. 17. ಹೋಟೆಲ್‌ ಗಳಿಗೆ ಸದ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲು ಸಾಧ್ಯವಿಲ್ಲ, ವಿದ್ಯುತ್‌ ಸ್ಟೌವ್‌ ಗಳನ್ನು ಬಳಸಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದ್ದಾರೆ.





ತೈಲ ಪೂರೈಕೆ ಕಂಪನಿಗಳ ಜೊತೆ ಇಂದು ಮಹತ್ವದ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಪರಿಸ್ಥಿತಿ ಗಂಭೀರವಾಗಿದ್ದು, ಆದ್ದರಿಂದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ಗಳ ವಿತರಣೆಯಲ್ಲಿ ಅಡಚಣೆಯಾಗಲಿದೆ. ಇದನ್ನು ಸರಿದೂಗಿಸಲು ಎಲೆಕ್ಟ್ರಿಕ್‌ ಸ್ಟೌವ್‌ ಗಳನ್ನು ಬಳಬೇಕೆಂದು ಸಚಿವರು ಮನವಿ ಮಾಡಿದ್ದಾರೆ.






ಕೇಂದ್ರ ಸರ್ಕಾರ ಕೂಡಲೇ ಇದರ ಬಗ್ಗೆ ಗಮನ ಹರಿಸಿ ಈಗಾಗಲೇ ತೈಲಕಂಪನಿಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಅಗತ್ಯ ಮಾಹಿತಿಗಳನ್ನು ಪಡೆದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

error: Content is protected !!
Scroll to Top