ಕೋಳಿ ಅಂಕಕ್ಕೆ ದಾಳಿ- ಐವರ ವಿರುದ್ಧ ಪ್ರಕರಣ ದಾಖಲು



(ನ್ಯೂಸ್ ಕಡಬ) newskadaba.com ಮಾ. 15. ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 4 ಹುಂಜಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಶೆಟ್ಟಿಕೋಡಿ ಎಂಬಲ್ಲಿ ನಡೆದಿದೆ.





ಕೊಡಂಬೆಟ್ಟು ಗ್ರಾಮದ ಮುಗೇರ ಮನೆಯ ಅಂಕಿತ್, ಉರುಡಾಯಿ ನಿವಾಸಿ ಯಶೋಧರ, ಮುಗೇರ ಮನೆಯ ಶಿವಪ್ಪ, ತಣ್ಣೀರುಪಂಥ ಗ್ರಾಮದ ಮುಂದಿ ಮನೆಯ ಕರುಣಾಕರ ಪೂಜಾರಿ, ಮಚ್ಚಿನ ಗ್ರಾಮದ ಮಡಕ್ಕಿಲ ಮನೆಯ ಉಮೇಶ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳದಿಂದ ನಾಲ್ಕು ಅಂಕದ ಹುಂಜ, ಜೂಜಾಟಕ್ಕೆ ಬಳಸಿದ 2,500 ರೂ. ನಗದು, ಎರಡು ಕೋಳಿ ಬಾಳು, ಒಂದು ಅಟೋ ರಿಕ್ಷಾವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.






error: Content is protected !!
Scroll to Top